ಸಮಗ್ರ ನ್ಯೂಸ್ : ಭೀಕರ ಬರಗಾಲದಿಂದ ಕಂಗೆಟ್ಟ ಭೀಮಾತೀರದ ರೈತರಿಗೆ ಒಂದರ ಮೇಲೊಂದು ತೊಂದರೆಗಳು ಉಲ್ಬಣವಾಗುತ್ತಿವೆ. ಕಳೆದ ರಾತ್ರಿ ವಿದ್ಯುತ್ ತಂತಿ ಸ್ಪರ್ಶದಿಂದ ಬೆಂಕಿ ಉದ್ಬವಿಸಿ ಎರಡು ಎಕರೆ ಕಬ್ಬು ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ರೈತರ ಮೋಟಾರುಗಳು ಮತ್ತು ಪಂಪಸೇಟಗಳು ಬೆಂಕಿಗಾಹುತಿಯಾಗಿವೆ.
ನಂತರ ಮಾತನಾಡಿದ ರೈತ ಸೋಮಣ್ಣಾ ದೊಡ್ಮನಿ ಇರುವ ಎರಡು ಎಕರೆ ಹೊಲದಲ್ಲಿ ನದಿಯಲ್ಲಿ ನೀರು ಇಲ್ಲದಿದ್ದರೂ ಕಷ್ಟ ಪಟ್ಟು ಕಬ್ಬು ಬೆಳೆದಿದ್ದೆನೆ. ಇನ್ನೇನು ಕಬ್ಬು ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ವಿದ್ಯುತ್ ತಂತಿಯಿಂದ ಕಬ್ಬು ಸುಟ್ಟು ಹೋಗಿದೆ. ಇಲ್ಲಿಯವರೆಗೆ ಯಾರೊಬ್ಬ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಬೆಂಕಿ ನಂದಿಸುವ ಕಾರ್ಯದಲ್ಲಿ ನಾವು ನಿರತರಾಗಿ ಕಬ್ಬು ಸುಟ್ಟಿರುವ ಚಿಂತೆಯಲ್ಲಿದ್ದೆವೆ. ಕೂಡಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ಒದಗಿಸಿಬೇಕು ಎಂದು ಮನವಿ ಮಾಡಿದರು.
ನಂತರ ಮಾತನಾಡಿದ ರೂಪಾ ನಂದಿ ನಾವು ರೈತಾಪಿ ವರ್ಗದ ಜನರು.ನಮ್ಮ ದುಡಿಮೆಯೇ ರೈತಪಿ ಕೆಲಸವಾಗಿದ್ದು, ಈ ಬಾರಿ ಹೇಳಿಕೊಳ್ಳುವಷ್ಟು ಮಳೆ ಬಾರದೆ ನಮಗೆ ಸಂಕಷ್ಟ ತಂದೊಡ್ಡಿದೆ. ಭೀಮಾ ನದಿಯಲ್ಲಿ ಹನಿ ನೀರು ಸಿಗದೆ ಪರದಾಡುವ ಪರಸ್ಥಿತಿ ಎದುರಾಗಿದೆ. ಹಿಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ವಿದ್ಯುತ್ ತಂತಿ ಸ್ಪರ್ಶ ದಿಂದ ನಮ್ಮ ಪಕ್ಕದ ರೈತರ ಎರಡು ಎಕರೆ ಕಬ್ಬು ಸೇರಿದಂತೆ ಸುಮಾರು 20 ನೀರು ಸಾಗಿಸುವ ಮೋಟಾರುಗಳು ಮತ್ತು ಕೇಬಲ್ ತಂತಿಗಳು, ಪಂಪಸೇಟ್ಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ.
ಈ ಭಾಗದ ರೈತರೆಲ್ಲರೂ ಕೃಷಿಯನ್ನ ಅವಲಂಬಿಸಿ ಬದುಕಿದ್ದೇವು. ಕೃಷಿಗೆ ಸಂಬಂಧಿಸಿದ ಕೃಷಿ ಉಪಯೋಗಿ ಉಪಕರಣಗಳು ಸುಟ್ಟು ಭಸ್ಮವಾಗಿವೆ. ಮುಂದೆ ಏನು ಮಾಡುವುದು ತಿಳಿಯದಾದ ಪರಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು.ಹಾನಿಗೊಳಗಾದ ರೈತರಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಕಡ್ಲೇವಾಡ ಗ್ರಾಮದ ರೈತರ ಹೋಲಗಳ ಸರ್ವೇ ನಂಬರ 7/1 ರಲ್ಲಿನ ಎಲ್ಲಾ ರೈತುಪಯೋಗಿ ಪರಿಕರಗಳು ಸೇರಿದಂತೆ ಕೆಬಲ್ ತಂತಿ ಎರಡು ಎಕರೆ ಕಬ್ಬು ಸುಟ್ಟು ಕರಕಲಾಗಿ ಹೋಗಿದೆ. ಕಡ್ಲೇವಾಡ ಸಿಮಾಂತರದ ರೈತರಾದ ಸೊಮಣ್ಣಾ ದೊಡ್ಮನಿ,ಕಲ್ಲಪ್ಪ ಹರಿಜನ,ತಿಪ್ಪಣ್ಣ ಹರಿಜನ,ಶಿವಪುತ್ರ ತಳವಾರ,ಭಿಮಶ್ಯಾ ರೊಳೆನವರ,ಶಿವಪುತ್ರ,ಸೋಮುಗೌಡ ಪಾಟೀಲ,ಸಿದ್ದಣ್ಣಗೌಡ ಪಾಟೀಲ,ಜಟ್ಟೆಪ್ಪ ವಾಲಿಕಾರ,ರೂಪಾ ನಂದಿ,ಸಿದ್ದು ನಂದಿ,ಮಲ್ಲಿಕಾರ್ಜುನ ರೊಳೆನವರ,ಹುಚ್ಚಪ್ಪ ರೊಳೆನವರ ಸೇರಿದಂತೆ ಇನ್ನೂ ಅನೇಕ ರೈತರ ಪಂಪಸೆಟಗಳು ಸೇರಿದಂತೆ ಮೊಟರಗಳು ಸುಟ್ಟು ಭಸ್ಮವಾಗಿವೆ.