ಸಮಗ್ರ ನ್ಯೂಸ್: ಕನ್ನಡ ಚಿತ್ರರಂಗದ ನಟಿ ಅದಿತಿ ಪ್ರಭುದೇವ ಅವರು ತಾಯಿಯಾಗುತ್ತಿರುವ ವಿಷಯ ಎಲ್ಲರಿಗೂ ತಿಳಿದಿರುವಂತಹದು. ಆದ್ರೆ ಇದೀಗ ಹೆಣ್ಣು ಮಗುವಿಗೆ ಅವರು ಜನ್ಮ ನೀಡಿದ್ದಾರೆ ಎಂಬ ವಿಚಾರವನ್ನು ಸ್ವತಃ ಅದಿತಿ ಪ್ರಭುದೇವ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ ಪೋಟೋಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆ ಪೋಸ್ಟ್ ನಲ್ಲಿ ಹೆಣ್ಣು ಮಗುವಿನ ಪುಟ್ಟ ಕೈಯನ್ನು ಅದಿತಿ ಅವರು ಶೇರ್ ಮಾಡಿಕೊಂಡಿದ್ದಾರೆ. ಈಗ ಎಲ್ಲರಿಂದ ಶುಭಾಶಯದ ಮಹಾಪೂರವೆ ಹರಿದು ಬರುತ್ತಿದೆ.
ಆದ್ರೆ ಅದಿತಿ ಪ್ರಭುದೇವ ಅವರಿಗೆ ಏಪ್ರಿಲ್ 4ರಂದು ಹೆಣ್ಣು ಮಗು ಜನಿಸಿದೆ. ‘4.4.2024 ನಮ್ಮನೆ ಮಹಾಲಕ್ಷ್ಮಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು’ ಎಂಬ ಕ್ಯಾಪ್ಷನ್ನೊಂದಿಗೆ ಅದಿತಿ ಪ್ರಭುದೇವ ಅವರು ಖುಷಿಯ ಸಮಾಚಾರ ತಿಳಿಸಿದ್ದಾರೆ. ‘ನನ್ನ ಜೀವದ ಗೆಳತಿ ಅದಿತಿ. ನಿನ್ನ ಹಾಗೆಯೇ ನಮ್ಮ ಮಗಳು’ ಎಂದು ಯಶಸ್ ಪಾಟ್ಲಾ ಅವರು ಈ ಪೋಸ್ಟ್ಗೆ ಕಮೆಂಟ್ ಮಾಡಿದ್ದಾರೆ.
ಅದಿತಿ ಪ್ರಭುದೇವ ಅವರು 2022ರ ನವೆಂಬರ್ನಲ್ಲಿ ಯಶಸ್ ಪಾಟ್ಲಾ ಅವರನ್ನು ವಿವಾಹವಾದರು. 2024ರ ಜನವರಿ 1ರಂದು ಅದಿತಿ ಪ್ರಭುದೇವ ಅವರು ತಾವು ತಾಯಿ ಆಗುತ್ತಿರುವ ವಿಷಯವನ್ನು ಬಹಿರಂಗ ಪಡಿಸಿದ್ದರು. ಇದೀಗ ಈ ವಿಚಾರ ಅಭಿಮಾನಿಗಳಿಗೆ ಇನ್ನೂ ಸಂತಸ ತಂದಿದೆ.