ಸಮಗ್ರ ನ್ಯೂಸ್: ದಕ್ಷಿಣ ಭಾರತದ ಹೆಸರಾಂತ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸತತ ಹದಿಮೂರನೇಯ ವರ್ಷವೂ ರಾಜ್ಯದ ನಂಬರ್ ಒನ್ ಶ್ರೀಮಂತ ದೇಗುಲ ಎಂಬ ಪಟ್ಟ ಉಳಿಸಿಕೊಂಡಿದೆ. ಈ ಬಾರಿ ದೇಗುಲದ ಆದಾಯ ದಾಖಲೆಯನ್ನು ಬರೆದಿದೆ. ಕುಕ್ಕೆಯ ಆದಾಯ ಕೇವಲ ಭಕ್ತರಿಂದ ಮಾತ್ರ ಬರುತ್ತಾ? ದೇಗುಲಕ್ಕೆ ಇರುವ ಬೇರೆ ಆದಾಯದ ಮೂಲಗಳು ಯಾವುದು ಎಂಬುವುದರ ಬಗ್ಗೆ ಕುತುಹೂಲ ಇದ್ಯಾ, ಹಾಗಾದರೆ ಈ ಸ್ಟೋರಿ ನೋಡಿ.
13ನೇ ವರ್ಷವೂ ರಾಜ್ಯದ ನಂಬರ್ 1 ಶ್ರೀಮಂತ ದೇಗುಲ
ದಕ್ಷಿಣ ಭಾರತದಲ್ಲೇ ನಾಗಾರಾಧನೆಗೆ ಪ್ರಸಿದ್ಧಿಯಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ವಾರ್ಷಿಕ ಆದಾಯ ಲೆಕ್ಕಪಟ್ಟಿ ಬಿಡುಗಡೆಯಾಗಿದೆ. ಈ ಬಾರಿಯೂ ಕುಕ್ಕೆ ದಾಖಲೆಯ ಆದಾಯ ಗಳಿಸುವುದರ ಜೊತೆಗೆ ಸತತ 13 ವರ್ಷದಿಂದ ರಾಜ್ಯದ ನಂಬರ್ ಒನ್ ಶ್ರೀಮಂತ ದೇವಾಲಯ ಎಂಬ ಪ್ರಸಿದ್ಧಿ ಪಡೆದಿದೆ. 2007 ರಲ್ಲಿ 19.76 ಕೋಟಿಯಿಂದ ಆರಂಭವಾದ ದೇಗುಲದ ಆದಾಯದ ಗ್ರಾಫ್ ಈಗ 146.01 ಕೋಟಿಯವರೆಗೆ ಬಂದು ನಿಂತಿದೆ. 2023-2024 ರ ವಾರ್ಷಿಕ ಆದಾಯದ ಲೆಕ್ಕಾಚಾರ ನಡೆದಿದ್ದು ಕುಕ್ಕೆ ಕಳೆದ ಬಾರಿಗಿಂತ 23 ಕೋಟಿ ರೂಪಾಯಿ ಅಧಿಕ ಲಾಭ ಪಡೆದಿದೆ. ಕಳೆದ ವರ್ಷ ದೇವಾಲಯದ ಆದಾಯ 123 ಕೋಟಿ ರೂಪಾಯಿ ಆಗಿತ್ತು.
ಯಾವಾಗ ಎಷ್ಟಿತ್ತು?
ದೇವಾಲಯದ ಆದಾಯದ ಗ್ರಾಫ್ ಕಾರ್ಡ್‍ನ್ನು ಗಮನಿಸೋದಾದರೆ 2006-07ರ ಆರ್ಥಿಕ ವರ್ಷದಲ್ಲಿ ಕುಕ್ಕೆಯ ಆದಾಯ 19.76 ಕೋಟಿ ಇತ್ತು. 2007-08ರಲ್ಲಿ 24.44 ಕೋಟಿಯಾಗುವ ಮೂಲಕ ರಾಜ್ಯದ ನಂಬರ್ ಒನ್ ಶ್ರೀಮಂತ ದೇಗುವ ಎಂಬ ಪಟ್ಟ ಅಲಂಕಾರ ಮಾಡಿತ್ತು. ಮುಂದೆ ಕ್ರಮವಾಗಿ 2008-09ರಲ್ಲಿ 31 ಕೋಟಿ, 2009-10 ರಲ್ಲಿ 38.51 ಕೋಟಿ, 2011-12 ರಲ್ಲಿ 56.24 ಕೋಟಿ, 2012-13 ರಲ್ಲಿ 66.76 ಕೋಟಿ, 2013-14ರಲ್ಲಿ 68 ಕೋಟಿ, 2014-15ರಲ್ಲಿ 77.60 ಕೋಟಿ, 2015-16ರಲ್ಲಿ 88.83ಕೋಟಿ, 2016-17ರಲ್ಲಿ 89.65 ಕೋಟಿ, 2017-18ರಲ್ಲಿ 95.92 ಕೋಟಿ, 2018-19ರಲ್ಲಿ 92.09 ಕೋಟಿ, 2019-20ರಲ್ಲಿ 98.92 ಕೋಟಿ ಗಳಿಸಿತ್ತು.
ಆದರೆ ಕೋರೊನಾ ಕಾರಣದಿಂದ 2020-21ರಲ್ಲಿ ಕ್ಷೇತ್ರದ ಆದಾಯ 68.9ಕೋಟಿಗೆ ಇಳಿಕೆಯಾಗಿತ್ತು. ಆದರೂ ನಂಬರ್ ವನ್
ಪಟ್ಟವನ್ನು ಮಾತ್ರ ಉಳಿಸಿಕೊಂಡಿತ್ತು. ಮತ್ತೆ 2021-22ರಲ್ಲಿ 72.73, 2022-23ರಲ್ಲಿ 123 ಕೋಟಿಯನ್ನು ಗಳಿಸಿತ್ತು. ಇದೀಗ 2023-24ರ ಆರ್ಥಿಕ ವರ್ಷದಲ್ಲಿ ಕುಕ್ಕೆ 146.01 ಕೋಟಿ ರೂಪಾಯಿ ಆದಾಯ ಗಳಿಸಿದೆ. ಕಳೆದ ಬಾರಿಗಿಂತ ಈ ಬಾರಿ 23 ಕೋಟಿ ರೂಪಾಯಿ ಅಧಿಕ ಲಾಭವನ್ನು ಗಳಿಸಿದೆ.
ಕುಕ್ಕೆಯ ಆದಾಯದ ಮೂಲಗಳು ಅಧಿಕವಾಗಿದೆ. ದೇವಸ್ಥಾನಕ್ಕೆ ಮುಖ್ಯವಾಗಿ ಗುತ್ತಿಗೆ, ತೋಟದ ಉತ್ಪನ್ನ, ಕಟ್ಟಡ ಬಾಡಿಗೆ, ಕಾಣಿಕೆ ಹುಂಡಿ, ಹರಕೆ ಸೇವೆ, ಅನ್ನದಾನ, ಶಾಶ್ವತ ಸೇವೆಗಳಿಂದ ಆದಾಯ ಬರುತ್ತಿದೆ. ಈ ಬಾರಿ ಯ ಒಟ್ಟು ಲೆಕ್ಕಾಚಾರ ಚುಪ್ತಾ ಆಗಿದ್ದರೂ ಸೇವೆ ಕಾಣಿಕೆಗಳ ಆದಾಯ ವಿಭಜನೆ ಇನ್ನಷ್ಟೇ ನಡೆಯಬೇಕಿದೆ. ಈ ಲೆಕ್ಕಾಚಾರ ಇನ್ನೆರೆಡು ದಿನಗಳಲ್ಲಿ ಲಭ್ಯವಾಗುವ ಸಾಧ್ಯತೆಗಳಿವೆ.