ಸಮಗ್ರ ನ್ಯೂಸ್: ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದೆ. ತಾಪಮಾನವು ದಾಖಲೆಯ ಗರಿಷ್ಠ ಮಟ್ಟಕ್ಕೆ ಏರುತ್ತಿದೆ. ಮುಂದಿನ ದಿನಗಳಲ್ಲಿ ಹಗಲಿನಲ್ಲಿ ಬೆಂಗಳೂರು ತಾಪಮಾನವು ದೆಹಲಿ ಮತ್ತು ಮುಂಬೈ ಅನ್ನು ಮೀರಿಸುತ್ತೆ ಎಂದು ವರದಿಯಾಗಿದೆ. ಕಲಬುರಗಿ ಜಿಲ್ಲೆಯ ಮಾದನ ಹಿಪ್ಪರರ್ಗಾ, ನಿಂಬರ್ಗಾ ತಾಂಡಾ ಮತ್ತು ರಾಯಚೂರು ಜಿಲ್ಲೆಯ ಹೂಡಾ ಹೋಬಳಿಯಲ್ಲಿ ಶುಕ್ರವಾರ (ಏ.05) ರಂದು 44.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಅತಿ ಹೆಚ್ಚು ತಾಪಮಾನ ದಾಖಲು
ಏಪ್ರಿಲ್ 5 ರಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದಾದ್ಯಂತ 42 ರಿಂದ 44.5 ಡಿಗ್ರಿ ಸೆಲ್ಸಿಯಸ್ ನಡುವೆ ಗರಿಷ್ಠ ತಾಪಮಾನ ದಾಖಲಾಗಿದೆ. ಕಳೆದ 7 ವರ್ಷಕ್ಕೆ ಹೋಲಿಸಿದರೆ ಅತಿ ಹೆಚ್ಚು ತಾಪಮಾನ ದಾಖಲಾಗಿದೆ ಎಂದು ಟಿವಿ 9 ಕನ್ನಡ ವರದಿ ಮಾಡಿದೆ.
ಬಿಸಿಲ ಬೇಗೆಯಿಂದ ಕಂಗೆಟ್ಟ ಜನರಿಗೆ ಹವಾಮಾನ ಇಲಾಖೆ ಗುಡ್‍ನ್ಯೂಸ್ ನೀಡಿದೆ. ಮುಂದಿನ ವಾರದಲ್ಲಿ ಮಳೆ ಬರುವುದು ಪಕ್ಕಾ ಎಂದು ಸೂಚನೆ ನೀಡಿದೆ.ಏಪ್ರಿಲ್ 9ರಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಯುಗಾದಿ ಹಬ್ಬಕ್ಕೆ ವರುಣನ ಆಗಮನವಾಗಲಿದೆ ಎಂದು ಸೂಚನೆ ಸಿಕ್ಕಿದೆ.