ಸಮಗ್ರ ನ್ಯೂಸ್ : ಸೂರ್ಯನ ಆರ್ಭಟಕ್ಕೆ ಜನರು ಬೆಂದು ಹೋಗುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಜನರು ಬಾಯಿ ಬಿಡುತ್ತಿದ್ದಾರೆ. ಈ ವೇಳೆ ನಾಗರಾಜ ಗಬ್ಬೂರ ಎಂಬ ಆಟೋ ಚಾಲಕನೊಬ್ಬ ಪ್ರಯಾಣಿಕರ ದಾಹ ತೀರಿಸಲು ಒಂದು ಮಹತ್ತರ ಕಾರ್ಯವನ್ನು ಮಾಡಿದ್ದಾರೆ.
ಆಟೋಗಳಲ್ಲಿ ನೀರಿನ ಕ್ಯಾನ್ಗಳನ್ನು ಅಳವಡಿಸಿ ಪ್ರಯಾಣಿಕರ ದಾಹ ತೀರಿಸುತ್ತಿರುವ ಆಟೋ ಚಾಲಕ ನಾಗರಾಜ ಗಬ್ಬೂರ. ಈತ ಸುಮಾರು ನಾಲ್ಕೈದು ವರ್ಷಗಳಿಂದ ತನ್ನ ಆಟೋದಲ್ಲಿ ಮಾತ್ರ ನೀರಿನ ಕ್ಯಾನ್ ಇಟ್ಟುಕೊಂಡು ಚಲಿಸುತ್ತಿದ್ದರು.
ಆದ್ರೆ ಈ ವರ್ಷ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ತನ್ನ ಸ್ವಂತ ಹಣದಲ್ಲೆ ಆಟೋ ಚಾಲಕ ನಾಗರಾಜ ಅವರು, ಸುಮಾರು 14 ಆಟೋಗಳಿಗೆ ನೀರಿನ ಕ್ಯಾನ್ಗಳನ್ನು ಅಳವಡಿಸುವ ಮೂಲಕ ಒಂದು ಒಳ್ಳೆಯ ಕಾರ್ಯವನ್ನು ಮಾಡಿದ್ದಾರೆ. ಈಗಾಗಲೇ ಪ್ರಯಾಣಿಕರು, ಸಾರ್ವಜನಿಕರು ಆಟೋದಲ್ಲಿ ಬಂದು ನೀರು ಕುಡಿಯುವ ಮೂಲಕ ದಾಹ ತಿರಿಸಿಕೊಂಡು ಆತನ ಕಾರ್ಯಕ್ಕೆ ಧನ್ಯವಾದ ತಿಳಿಸುತ್ತಿದ್ದಾರೆ.
ಒಟ್ಟಾರೆ ಹೇಳುವುದಾದರೆ ಆಟೋ ಚಾಲಕರೆಂದ್ರೆ ಜಾಸ್ತಿ ದುಡ್ಡು ತಗೋತಾರೆ ಅನ್ನೋರಿಗೆ. ಅದೇ ಆಟೋ ಚಾಲಕರು ಬಿಸಿಲಿನ ತಾಪಕ್ಕೆ ಜನರು ದಾಹ ತೀರಿಸಿಕೊಳ್ಳಲು ನೀರಿನ ವ್ಯವಸ್ಥೆ ಮಾಡಿದ್ದು ಒಳ್ಳೆಯ ಸಂಗತಿ. ನಾಗರಾಜ ಅವರ ಕಾರ್ಯಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಹುಬ್ಬಳ್ಳಿ ಜನ ಶಹಬ್ಬಾಷ್ ಎಂದಿದ್ದಾರೆ.