ಸಮಗ್ರ ನ್ಯೂಸ್ : ರಾಜಸ್ಥಾನ್ ರಾಯಲ್ಸ್ ತಂಡವು ಇಂದು ಆರ್‌ಸಿಬಿ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಪಿಂಕ್ ಬಣ್ಣದ ವಿಶೇಷ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ. ರಾಜಸ್ಥಾನದ ಮಹಿಳೆಯರ ಸಬಲೀಕರಣಕ್ಕೆ ನೆರವಾಗುವ ಉದ್ದೇಶವೂ ಇದಾಗಿದೆ. ಈ ಪಂದ್ಯವು ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ.
ರಾಜಸ್ಥಾನ್ ರಾಯಲ್ಸ್ ತಂಡವು ಮಹಿಳಾ ಸಬಲೀಕರಣ ಉದ್ದೇಶದಿಂದ ಈ ಅಭಿಮಾನ ಆರಂಭಿಸಿದೆ. ಅದಕ್ಕಾಗಿ ವಿಶೇಷ ಪಿಂಕ್ ಜೆರ್ಸಿ ಧರಿಸಿ ಆರ್‌ಸಿಬಿ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯದ ಪ್ರತಿ ಟಿಕೆಟ್ ಬೆಲೆಯಲ್ಲಿ 100 ರೂ.ಗಳನ್ನ ಮಹಿಳಾ ಸಬಲೀಕರಣ ಕಾರ್ಯಕ್ಕೆ ಸಮರ್ಪಿಸಲಿದೆ. ಜೊತೆಗೆ ʻಆಲ್ ಪಿಂಕ್ ರಾಯಲ್ಸ್ʼ ಜೆರ್ಸಿ ಮಾರಾಟದ ಮೊತ್ತವನ್ನೂ ಇದಕ್ಕೆ ವಿನಿಯೋಗಿಸಲಿದೆ. ಅಷ್ಟೇ ಅಲ್ಲದೇ ರಾಜಸ್ಥಾನ-ಆರ್‌ಸಿಬಿ ತಂಡಗಳು ಈ ಪಂದ್ಯದಲ್ಲಿ ಸಿಡಿಸುವ ಪ್ರತಿ ಸಿಕ್ಸರ್‌ಗೆ ಜೈಪುರ ಜಿಲ್ಲೆಯ ಸಂಭರ್ ಗ್ರಾಮದ ಪ್ರತಿ 6 ಮನೆಗಳಿಗೆ ಸೌರಶಕ್ತಿಯನ್ನು ಫ್ರಾಂಚೈಸಿ ವತಿಯಿಂದ ಒದಗಿಸಲಾಗುತ್ತದೆ.
ಬಿಸಿಸಿಐ ಸೇರಿದಂತೆ ಹಲವು ಫ್ರಾಂಚೈಸಿಗಳು ಐಪಿಎಲ್ ಟೂರ್ನಿಯನ್ನ ಕೇವಲ ಹಣದ ಉದ್ದೇಶಕ್ಕಾಗಿ ನಡೆಸದೇ ವಿಶಿಷ್ಟ ಜಾಗೃತಿ ಅಭಿಯಾನಗಳನ್ನೂ ಹಮ್ಮಿಕೊಳ್ಳಲಾಗುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತಿ ಆವೃತ್ತಿಯ ಒಂದು ಪಂದ್ಯದಲ್ಲಿ ಹಸಿರು ಪರಿಸರ ಜಾಗೃತಿ ದೃಷ್ಟಿಯಿಂದ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯುತ್ತದೆ. ಕಳೆದ ವರ್ಷ ಗುಜರಾತ್ ಟೈಟಾನ್ಸ್ ತಂಡವು ಅನ್ನನಾಳದ ಕ್ಯಾನ್ಸರ್ ಕುರಿತು ಜಾಗೃತಿಗಾಗಿ ಲ್ಯಾವೆಂಡರ್ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿದಿತ್ತು. ಅಲ್ಲದೇ 2023ರ ಐಪಿಎಲ್ ಆವೃತ್ತಿಯ ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳಲ್ಲಿ ಪ್ರತಿ ಡಾಟ್ ಬಾಲ್‌ಗೆ 500 ಗಿಡಗಳನ್ನು ನೆಡುವ ಅಭಿಯಾನವನ್ನೂ ಹಮ್ಮಿಕೊಂಡಿತ್ತು.