ಸಮಗ್ರ ನ್ಯೂಸ್: ಸೆಕೆಗಾಲ ಬಂದಾಯ್ತು, ಈಗಿನ ಸೆಖೆಗೆ ಉಸ್ಸಪ್ಪಾ ಅಂತ ಹೇಳುತ್ತಿದ್ದೇವೆ. ಆದರೆ ಇನ್ನೂ ಸೆಕೆ ಜಾಸ್ತಿ ಆಗುತ್ತೆ ಅಂತೆ. ಇಲ್ಲಿದೆ ವೆದರ್ ರಿಪೋರ್ಟ್.
ಭಾರತದ ಹವಾಮಾನ ಇಲಾಖೆ (IMD) ದೇಶಾದ್ಯಂತ ಕೆಲವು ಕಡೆ ವಿಪರೀತ ಸೆಕೆ ಮತ್ತು ಕೆಲವು ಮಳೆಯ ಮುನ್ಸೂಚನೆ ನೀಡಿದೆ. ದೇಶದೆಲ್ಲೆಡೆ ಕಳೆದ ಕೆಲವು ಬಿಸಿಲು ಧಗಧಗನೆ ಉರಿಯುತ್ತಿದೆ. ಜನ ಸೆಕೆ ತತ್ತರಿಸಿದ್ದಾರೆ. ಬೆಳಗ್ಗೆಯಿಂದಲೇ ಬಿಸಿಲು ತಾಪ ಆರಂಭವಾಗಿ ಹೊರಗಡೆ ಜನ ತಿರುಗಾಡಲು ಯೋಚಿಸುವಂತಾಗಿದೆ.
ಇದೀಗ ಹವಾಮಾನ ಇಲಾಖೆ ಕೂಡ ಕೆಲವು ರಾಜ್ಯಗಳಿಗೆ ಭಾರೀ ತಾಪಮಾನ ಹಾಗೂ ಈಶಾನ್ಯದ ರಾಜ್ಯಗಳಿಗೆ ಮಳೆ ಎಚ್ಚರಿಕೆ ನೀಡಿ, ರಾಜ್ಯಗಳ ಪಟ್ಟಿಯನ್ನು ಹವಾಮಾನ ಇಲಾಖೆ ಬಿಡುಗಡೆ ಮಾಡಿದೆ. ಈ ಹಿಂದೆ, ಹವಾಮಾನ ಇಲಾಖೆಯು ಮುಂಬರುವ ತಿಂಗಳುಗಳಲ್ಲಿ ಭಾರತದ ಕೆಲವು ರಾಜ್ಯಗಳಲ್ಲಿ ತೀವ್ರ ಶಾಖದ ಎಚ್ಚರಿಕೆಯನ್ನು ನೀಡಿತ್ತು.
ಒಡಿಶಾ, ಗಂಗಾನದಿ ಪಶ್ಚಿಮ ಬಂಗಾಳ, ಜಾರ್ಖಂಡ್, ವಿದರ್ಭ, ಉತ್ತರ ಕರ್ನಾಟಕ, ಪುದುಚೇರಿ, ಕರಾವಳಿ ಆಂಧ್ರಪ್ರದೇಶ, ಯಾನಂ, ರಾಯಲಸೀಮಾ ಮತ್ತು ತೆಲಂಗಾಣದಲ್ಲಿ ಏಪ್ರಿಲ್ 6 ರಂದು ಭಯನಾಕ ಬಿಸಿಲಿನ ಪರಿಸ್ಥಿತಿಗಳಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ ಎಂದು IMD ತಿಳಿಸಿದೆ. ಆದರೆ ಭಾನುವಾರದಿಂದ ಮೂರು ದಿನಗಳ ಕಾಲ ತೆಲಂಗಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ ಹೈದರಾಬಾದ್‌ನಲ್ಲಿ ಬಿಸಿಲಿನ ವಾತಾವರಣ ಇರಲಿದೆ.
ಕೇರಳ, ಪುದುಚೇರಿ ಮತ್ತು ತಮಿಳುನಾಡು ಕೂಡ ಏಪ್ರಿಲ್ 8 ರವರೆಗೆ ಹೀಟ್ವೇವ್ ಮತ್ತು ಬಿಸಿಗಾಳಿ ವಾತಾವರಣವನ್ನು ಅನುಭವಿಸುವ ನಿರೀಕ್ಷೆಯಿದೆ ಮತ್ತು ಕರ್ನಾಟಕವು ನಾಳೆ ಮತ್ತು ಗೋವಾದಲ್ಲಿ ಏಪ್ರಿಲ್ 7 ರವರೆಗೆ ಬಿಸಿ ವಾತಾವರಣ ಇರಲಿದೆ ಎಂದು ತಿಳಿಸಿದೆ.
ಇದಕ್ಕೆ ವ್ಯತಿರಿಕ್ತವಾಗಿ, ಮುಂಬರುವ ಆರು ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ,ಅರುಣಾಚಲ ಪ್ರದೇಶ, ತ್ರಿಪುರಾ, ಮಣಿಪುರ ಮತ್ತು ಮಿಜೋರಾಂ ಸೇರಿ ಈಶಾನ್ಯ ರಾಜ್ಯಗಳು ಲಘುವಾಗಿ ಸಾಧಾರಣ ಮಳೆ ಅಥವಾ ಹಿಮಪಾತಕ್ಕೆ ಸಾಕ್ಷಿಯಾಗಲಿವೆ.
ಅರುಣಾಚಲ ಪ್ರದೇಶದಲ್ಲಿ ಏಪ್ರಿಲ್ 7 ರವರೆಗೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ ಮತ್ತು ಮೇಘಾಲಯದಂತಹ ರಾಜ್ಯಗಳಲ್ಲಿ ಶನಿವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ ಐದು ದಿನಗಳಲ್ಲಿ ಈ ಪ್ರದೇಶಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ.