Ad Widget .

ನವದೆಹಲಿ: ಕೇಂದ್ರ ಸರ್ಕಾರದಿಂದ ಐಫೋನ್‌ ಬಳಕೆದಾರರಿಗೆ ಎಚ್ಚರಿಕೆ

ಸಮಗ್ರ ನ್ಯೂಸ್‌ : ಭಾರತದಲ್ಲಿ ಅತಿ ಹೆಚ್ಚು ಜನ ಆ್ಯಪಲ್‌ ಕಂಪನಿಯ ಐಫೋನ್‌ ಸೇರಿ ಹತ್ತಾರು ಉತ್ಪನ್ನಗಳನ್ನು ಬಳಸುತ್ತಿದ್ದು, ದೇಶದಲ್ಲಿ ಆ್ಯಪಲ್‌ ಕಂಪನಿಯ ಉತ್ಪನ್ನಗಳನ್ನು ಬಳಸುವುದೇ ಹೆಗ್ಗಳಿಕೆಯ ಸಂಕೇತ. ಇಂತಹ ಪರಿಸ್ಥಿತಿಯ ಮಧ್ಯೆಯೇ, ಆ್ಯಪಲ್‌ ಕಂಪನಿಯ ಐಫೋನ್‌, ಮ್ಯಾಕ್‌ಬುಕ್ಸ್‌, ಐಪ್ಯಾಡ್ಸ್‌ ಹಾಗೂ ವಿಷನ್‌ ಪ್ರೊ ಹೆಡ್‌ಸೆಟ್‌ಗಳನ್ನು ಬಳಸುವವರಿಗೆ ಕೇಂದ್ರ ಸರ್ಕಾರ ಎಚ್ಚರಿಕೆಯನ್ನು ನೀಡಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ರಿಮೋಟ್‌ ಕೋಡ್‌ ಎಕ್ಸಿಕ್ಯೂಷನ್‌ಗೆ ಕನೆಕ್ಷನ್‌ ಮಾಡುವಾಗ ಏರುಪೇರಾಗಿದೆ. ಇದರಿಂದಾಗಿ ಐಫೋನ್‌, ಮ್ಯಾಕ್‌ಬುಕ್ಸ್‌, ಐಪ್ಯಾಡ್ಸ್‌ ಹಾಗೂ ವಿಷನ್‌ ಪ್ರೊ ಹೆಡ್‌ಸೆಟ್‌ ಬಳಸುವುದು ಅಪಾಯಕಾರಿಯಾಗಿದೆ ಎಂದು ಭಾರತೀಯ ಕಂಪ್ಯೂಟರ್‌ ತುರ್ತು ಪ್ರತಿಕ್ರಿಯೆ ತಂಡ ಎಚ್ಚರಿಕೆ ನೀಡಿದೆ.

Ad Widget . Ad Widget . Ad Widget .

ಆ್ಯಪಲ್‌ ಸಫಾರಿ ವರ್ಷನ್‌ಗಳಾದ 17.4.1, Apple macOS Ventura ವರ್ಷನ್‌ಗಳು, Apple macOS Sonoma ವರ್ಷನ್‌ಗಳು, iPadOS ವರ್ಷನ್‌ಗಳ ಬಳಕೆಯಲ್ಲಿ ಭಾರಿ ಪ್ರಮಾಣದ ಸಮಸ್ಯೆಯುಂಟಾಗಿದೆ ಎಂದು ಮಾಹಿತಿ ನೀಡಿದೆ.

ಬಹುದೂರದಲ್ಲಿರುವ ಹ್ಯಾಕರ್‌ಗಳು ಐಫೋನ್‌, ಮ್ಯಾಕ್‌ಬುಕ್ಸ್‌, ಐಪ್ಯಾಡ್ಸ್‌ ಹಾಗೂ ವಿಷನ್‌ ಪ್ರೊ ಹೆಡ್‌ಸೆಟ್‌ ಹ್ಯಾಕ್‌ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ದೂರದಿಂದಲೇ ಹ್ಯಾಕರ್‌ಗಳು ಆ್ಯಪಲ್‌ ಕಂಪನಿಯ ಉತ್ಪನ್ನಗಳನ್ನು ಹ್ಯಾಕ್‌ ಮಾಡಿ, ಹಣ ಎಗರಿಸುವ ಜತೆಗೆ ವೈಯಕ್ತಿಕ ಮಾಹಿತಿಯನ್ನೂ ಕದಿಯುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಮಾಹಿತಿಯನ್ನು ನೀಡಿದೆ.

ಐಫೋನ್‌ ಎಕ್ಸ್‌ಎಸ್‌, ಐಪ್ಯಾಡ್‌ ಪ್ರೊ 12.19 ಇಂಚು, ಐಪ್ಯಾಡ್‌ ಪ್ರೊ 10.5 ಇಂಚು, ಐಪ್ಯಾಡ್‌ ಪ್ರೊ 11 ಇಂಚು, ಐಪ್ಯಾಡ್‌ ಏರ್‌, ಐಪ್ಯಾಡ್‌ ಹಾಗೂ ಐಪ್ಯಾಡ್‌ ಮಿನಿ ಬಳಸುವವರಿಗೆ ಹೆಚ್ಚು ಅಪಾಯವಿದೆ. ಐಫೋನ್‌ 8, ಐಫೋನ್‌ 8 ಪ್ಲಸ್‌, ಐಫೋನ್‌ ಎಕ್ಸ್‌, ಐಪ್ಯಾಡ್‌ 5ನೇ ಜನರೇಷನ್‌, ಐಪ್ಯಾಡ್‌ ಪ್ರೊ (9.7 ಇಂಚು) ಬಳಸುವವರಿಗೂ ಅಪಾಯವಿದೆ ಎಂದು ತಿಳಿಸಿದೆ. ಹಾಗಾಗಿ, ಬಳಕೆದಾರರು ಹೊಸ ಅಪ್‌ಡೇಟ್‌ಗಳನ್ನು ಕೂಡಲೇ ಮಾಡಿಕೊಳ್ಳಬೇಕು. ಸಾರ್ವಜನಿಕ ವೈಫೈಗೆ ಕನೆಕ್ಟ್‌ ಮಾಡುವುದು, ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಡೌನ್‌ ಮಾಡಿಕೊಳ್ಳುವುದು ಸೇರಿ ಹಲವು ಸೂಚನೆಗಳನ್ನು ನೀಡಿದೆ.

Leave a Comment

Your email address will not be published. Required fields are marked *