ಸಮಗ್ರ ನ್ಯೂಸ್ : ರಾಶುಗಳಿಗೆ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮಕ್ಕೆ ಸುತ್ತೂರು ಗ್ರಾಮದ ಪಶು ಆಸ್ಪತ್ರೆಯ ವೈದ್ಯಧಿಕಾರಿ ಡಾ. ಲಿಖಿತ್ ಚಾಲನೆ ನೀಡಿದರು.
ಸುತ್ತೂರು ಗ್ರಾಮದ ರೈತರ ಮನೆ ಬಾಗಿಲಿಗೆ ತೆರಳಿದ ವೈದ್ಯರು, ಐದನೇ ಸುತ್ತಿನ ಕಾಲು ಬಾಯಿ ಜ್ವರದ ಲಸಿಕೆಯನ್ನು ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ರಾಸುಗಳಿಗೆ ಓಲೆಗಳನ್ನು ಹಾಕುವುದರಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ರೈತರು ಪಡೆದುಕೊಳ್ಳಬಹುದು. ಹಾಗೂ ಹಸುವಿನ ತಳಿ ಮತ್ತು ಗರ್ಭಧಾರಣೆ, ಜಾನುವಾರುಗಳಿಗೆ ಇರುವ ರೋಗವನ್ನು ಕಂಡುಹಿಡಿಯಲು ಅನುಕೂಲವಾಗುತ್ತದೆ.
ರೈತರು ತಮ್ಮ ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪಶು ಇಲಾಖೆಯ ಮೋಹನ್ ಸೇರಿದಂತೆ ರೈತರು ಭಾಗವಹಿಸಿದ್ದರು.