ಸಮಗ್ರ ನ್ಯೂಸ್ : ತೋಷಖಾನ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಷಾರಾ ಬೀಬಿಗೆ ವಿಧಿಸಲಾಗಿದ್ದ 14 ವರ್ಷ ಜೈಲು ಶಿಕ್ಷೆಯನ್ನು ಪಾಕಿಸ್ತಾನ ಹೈಕೋರ್ಟ್ ರದ್ದುಗೊಳಿಸಿದೆ.
ಖಾನ್ ಅವರು 2018 ರಿಂದ 2022ರ ಅವಧಿಯಲ್ಲಿ ವಿದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವೀಕರಿಸಿದ 140 ಮಿಲಿಯನ್‌ಕ್ಕಿಂತ ಹೆಚ್ಚು ಮೌಲ್ಯದ ಉಡುಗೊರೆಗಳನ್ನು ಸರ್ಕಾರಿ ಸ್ವಾಧೀನದಲ್ಲಿ ಖರೀದಿಸಲು ಮತ್ತು ಮಾರಾಟ ಮಾಡಲು ಪ್ರೀಮಿಯರ್‌ಶಿಪ್ ಅನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪವನ್ನು ಖಾನ್ ಮೇಲೆ ಹೋರಿಸಲಾಗಿತ್ತು.
ಈ ಉಡುಗೊರೆಗಳು ಆಡಳಿತ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ತೋಷಖಾನ ವಿಭಾಗಕ್ಕೆ ಸೇರಿದ್ದಾಗಿದೆ. ಈ ಪ್ರಕರಣದಲ್ಲಿ ದೋಷಿಗಳಾಗಿದ್ದ ಖಾನ್ ದಂಪತಿಗೆ ಪಾಕಿಸ್ತಾನ ಸಾರ್ವರ್ತ್ರಿಕ ಚುನಾವಣೆಗೂ ಪೂರ್ವದಲ್ಲಿ ಜ. 31ರಂದು 14 ವರ್ಷಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿದ್ದು, . ಈ ಶಿಕ್ಷೆ ಪ್ರಮಾಣವನ್ನು ಇಸ್ಲಾಮಾಬಾದ್ ಹೈಕೋರ್ಟ್ ಸೋಮವಾರ ರದ್ದುಪಡಿಸಿದೆ.
‘71 ವರ್ಷದ ಇಮ್ರಾನ್ ಖಾನ್ ಅವರಿಗೆ ವಿಧಿಸಿದ್ದ ಶಿಕ್ಷೆ ಪ್ರಮಾಣ ರದ್ದತಿ ವಿರುದ್ಧ ಅರ್ಜಿಯ ವಿಚಾರಣೆಯು ಈದ್ ರಜೆಯ ನಂತರ ಆಲಿಸಲಾಗುವುದು’ ಎಂದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಮೀರ್ ಫಾರೂಖಿ ಹೇಳಿದ್ದಾರೆ.