ಸಮಗ್ರ ನ್ಯೂಸ್: ಏ. 26ರಂದು ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಹಾಸನ ಮೈಸೂರು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳ ರಾಜ್ಯದ ಗಡಿ ಭಾಗಗಳಲ್ಲಿನ ಪ್ರದೇಶದ ಕಾನೂನು ಹಾಗೂ ಸುವ್ಯವಸ್ಥೆ, ಅಕ್ರಮ ಚಟುವಟಿಕೆಗಳು, ನಕ್ಸಲ್ ಚಟುವಟಿಕೆಗಳು, ಸಾಮಾಜಿಕ ವಿರೋಧಿ ಅಂಶಗಳು, ಕೋಮುಗಲಭೆ, ರೌಡಿ ಆಸಾಮಿಗಳ ಮೇಲೆ ನಿಗಾ ಇಡುವುದು, ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ, ಪರಸ್ಪರ ವಿಷಯದ ಕುರಿತು ಚರ್ಚಿಸಿ ಮಾಹಿತಿಯನ್ನು ವಿನಿಮಯ ಹಾಗೂ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಸಲುವಾಗಿ ಹಿರಿಯ ಅಧಿಕಾರಿಗಳ ಸೂಚನೆಯಂತೆ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಇಂದು ಮಾರ್ಚ್ 29ರಂದು ವಿರಾಜಪೇಟೆ ಹಾಗೂ ಸೋಮವಾರಪೇಟೆಯಲ್ಲಿ ಅಂತರ್ ರಾಜ್ಯ ಗಡಿ ಜಿಲ್ಲ ಪೊಲೀಸರ ಅಪರಾಧ ವಿಭಾಗದ ಅಧಿಕಾರಿಗಳ ಸಭೆ ನಡೆಯಿತು.
ವಿರಾಜಪೇಟೆಯಲ್ಲಿ ನಡೆದ ಸಭೆಯಲ್ಲಿ ಗಡಿ ಭಾಗ ಹೊಂದಿಕೊಂಡಿರುವ ಕೊಡಗು ಹಾಗೂ ಕೇರಳ ರಾಜ್ಯದ ಪೊಲೀಸ್ ಅಧಿಕಾರಿಗಳು ಹಾಗೂ ಅರಣ್ಯ ಅಧಿಕಾರಿಗಳು ಕೂಡ ಪಾಲ್ಕೊಂಡು ಹಲವು ಮುಂಜಾಗ್ರತಾ ಕ್ರಮದ ಬಗ್ಗೆ ಪರಸ್ಪರ ಮಾಹಿತಿಯನ್ನು ವಿನಿಮಯ ಮಾಡಿಕೊಂಡು ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ.
ಸೋಮವಾರಪೇಟೆಯಲ್ಲಿ ನಡೆದ ಸಭೆಯಲ್ಲಿ ಗಡಿ ಭಾಗ ಹೊಂದಿಕೊಂಡಿರುವ ಕೊಡಗು, ಮೈಸೂರು, ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಸಭೆ ಸೇರಿ ಚರ್ಚಿಸಿದರು.
ವಿರಾಜಪೇಟೆಯಲ್ಲಿ ನಡೆದ ಸಭೆಯಲ್ಲಿ ಕೇರಳ ರಾಜ್ಯದ ಇರಿಟಿ ವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಯೋಗೀಶ್ ಮಂಡಯ್ಯ, ಮಾನಂದವಾಡಿ ಡಿಎಸ್.ಪಿ, ಪಿ ಬ್ರಿಜೇಶ್, ವಿರಾಜಪೇಟೆ ಡಿ.ವೈಎಸ್.ಪಿ ಆರ್ ಮೋಹನ್ ಕುಮಾರ್ ಹಾಗೂ ಗಡಿ ಭಾಗದ ಕೊಡಗು ಹಾಗೂ ಕೇರಳದ ಇತರ 15 ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸೋಮವಾರಪೇಟೆಯಲ್ಲಿ ನಡೆದ ಸಭೆಯಲ್ಲಿ ಕೊಡಗು ಜಿಲ್ಲೆಯ ಹೆಚ್ಚುವರಿ ಪೊಲೀಸ್, ಅಧೀಕ್ಷಕ ಸುಂದರರಾಜ್ ಕೆ.ಎಸ್, ಸೋಮವಾರ ಪೇಟೆ ಡಿವೈಎಸ್ಪಿ ಆರ್ ವಿ ಗಂಗಾಧರಪ್ಪ, ಹೊಳೆನರಸೀಪುರ ಡಿವೈಎಸ್ಪಿ ಅಶೋಕ್, ಸಕಲೇಶಪುರ ಡಿವೈಎಸ್ಪಿ ಪ್ರದೀಪ್ ಕುಮಾರ್, ಸೇರಿದಂತೆ ಗಡಿ ಜಿಲ್ಲೆಯ ಇತರ ಏಳು ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.