ಸಮಗ್ರ ನ್ಯೂಸ್: ಉತ್ತರ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳಲ್ಲಿ ಉಷ್ಣ ಅಲೆಯ ಮುನ್ನೆಚ್ಚರಿಕೆ ನೀಡಲಾಗಿದೆ.
ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಕಲಬುರಗಿ ಜಿಲ್ಲಗಳಲ್ಲಿ ಎರಡರಿಂದ ಮೂರು ಡಿಗ್ರಿಯಷ್ಟು ಉಷ್ಣಾಂಶ ಏರಿಕೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ವರುಣನ ಆಗಮನಕ್ಕೆ ತಡವಾದ ಕಾರಣ ನೆಲದ ಕಾವು ಏರುತ್ತಿದ್ದು ಈ ನಾಲ್ಕು ಜಿಲ್ಲೆಗಳಲ್ಲಿ ಉಷ್ಣಾಂಶ ಮಿತಿಮೀರಿದೆ ಆದರಿಂದ ಉಷ್ಣದ ಅಲೆ ಬೀಸುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ. ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ಗರಿಷ್ಟ ಉಷ್ಣಾಂಶ ಏರಿಕೆಯಾಗಿದೆ ಎಂದು ಹೇಳಲಾಗಿದೆ. ಅಲ್ಲದೇ ಉಷ್ಣಾಂಶ ಇನ್ನೂ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಇಳಾಖೆ ತಿಳಿಸಿದೆ. ಇನ್ನು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಈಗಿನ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಗಡಿಗೆ ತಲುಪಿದೆ. ಮಾರ್ಚ್‌ನಲ್ಲಿ ನಿಗಧಿತ ಪ್ರಮಾಣದ ಮಳೆಯಾಗಿಲ್ಲ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ನಾಟಕದಾದ್ಯಂತ ತಿಳಿ ನೀಲಿ ಆಗಸ ಮತ್ತು ಶುಷ್ಕ ಹವಾಮಾನದೊಂದಿಗೆ ಮುಂದಿನ ಮೂರು ದಿನ ಯಾವುದೇ ಮಾಳೆಯಾಗುವ ಸಾಧ್ಯತೆ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.