ಸಮಗ್ರ ನ್ಯೂಸ್: ಭಾರತದೊಂದಿಗೆ ಮೊಂಡುತನ ಮಾಡುವುದನ್ನು ನಿಲ್ಲಿಸಿ, ಮಾತುಕತೆಗೆ ಪ್ರಯತ್ನಿಸಿ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಗೆ ಹಿಂದಿನ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಹೇಳಿದ್ದಾರೆ.
ಭಾರತ ವಿರೋಧಿ ನಿಲುವು ಹೊಂದಿದ್ದ ಮೊಹಮ್ಮದ್ ಮುಝು ತಮ್ಮ ಧ್ವನಿಯನ್ನು ಬದಲಿಸಿಕೊಂಡಿದ್ದು ತಮ್ಮ ದೇಶಕ್ಕೆ ಭಾರತ ಸಾಲ ಪರಿಹಾರ (ಸಾಲ ಮನ್ನ) ನೀಡಬೇಕು ಎಂದು ಮನವಿ ಮಾಡಿದ ನಂತರ ಸೊಲಿಹ್ ಈ ಹೇಳಿಕೆ ನೀಡಿದ್ದಾರೆ.
ಸಾಲ ಪರಿಹಾರ ನೀಡಬೇಕು ಎಂದು ಮುಯಿಝು ಭಾರತದೊಂದಿಗೆ ಮಾತನಾಡಲು ಬಯಸುತ್ತಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ನೋಡಿದ್ದೇನೆ. ಆದರೆ ಆರ್ಥಿಕ ಸವಾಲುಗಳು ಭಾರತೀಯ ಸಾಲಗಳಿಂದ ಉಂಟಾಗುವುದಿಲ್ಲ ಎಂದು ಸೋಲಿಹ್ ಹೇಳಿರುವುದಾಗಿ ನ್ಯೂಸ್ ಪೋರ್ಟಲ್‍ವೊಂದು ಉಲ್ಲೇಖಿಸಿದೆ.
ಭಾರತಕ್ಕೆ ನೀಡಬೇಕಾದ 8 ಶತಕೋಟಿ ಹೋಲಿಸಿದರೆ ಮಾಲ್ಡೀವ್ಸ್ ಚೀನಾಕ್ಕೆ 18 ಶತಕೋಟಿ ಸಾಲ ಹೊಂದಿದೆ. ಮರುಪಾವತಿ ಅವಧಿಯು 25 ವರ್ಷಗಳಾಗಿವೆ. ಆದಾಗ್ಯೂ, ಭಾರತ ಸಹಾಯ ಮಾಡುತ್ತಾರೆ ಎಂಬ ವಿಶ್ವಾಸವಿದೆ. ನಾವು ಮೊಂಡುತನವನ್ನು ನಿಲ್ಲಿಸಬೇಕು ಮತ್ತು ಮಾತುಕತೆಗೆ ಪ್ರಯತ್ನಿಸಬೇಕು. ಮುಯಿಝಿ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ. ಅವರು ಈಗ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ ಎಂದು ಸೋಲಿಹ್ ಹೇಳಿದರು.