ಸಮಗ್ರ ನ್ಯೂಸ್: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ಅಬಕಾರಿ ನೀತಿ ಹಗರಣದಲ್ಲಿ ಅರೆಸ್ಟ್ ಆಗಿದ್ದಾರೆ. ಇತ್ತ ಪ್ರಧಾನಿ ಮೋದಿ ಸರ್ವಾಧಿಕಾರಿ ಧೋರಣೆಯಿಂದ ಪ್ರಜಾಪ್ರಭುತ್ವದ ಕಗ್ಗೋಲೆಯಾಗುತ್ತಿದೆ ಎಂದು ಆರೋಪಿಸಿ ಆಪ್ ಈಗಾಗಲೇ ದೇಶಾದ್ಯಂತ ಪ್ರತಿಭಟನೆ ಮಾಡಿದ್ದು, ಇಂದು ಹೋಳಿ ಹಬ್ಬವನ್ನು ಬಹಿಷ್ಕರಿಸಿದೆ.
ಕೇಜಿವಾಲ್ ಬಂಧನದಲ್ಲಿರುವ ಕಾರಣ ಆಪ್ ನಾಯಕರು ಯಾರು ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೋಳಿ ಹಬ್ಬ ಆಚರಣೆ ಗೆಲುವಿನ ಸಂಕೇತವಾಗಿದೆ. ಸಂಭ್ರಮದ ಸಂಕೇತವಾಗಿದೆ. ಆದರೆ ಆಪ್ ದುಷ್ಟರ ವಿರುದ್ಧ, ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ಮಾಡುತ್ತಿದೆ. ಹೀಗಾಗಿ ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ದೆಹಲಿ ಸಚಿವೆ. ಅತೀಶಿ ಹೇಳಿದ್ದಾರೆ.
ಆಮ್ ಆದ್ಮ ಪಾರ್ಟಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡುತ್ತೇವೆ. ಬಿಜೆಪಿ, ಪ್ರಧಾನಿ ಮೋದಿ ವಿರುದ್ಧ ಧ್ವನಿ ಎತ್ತುವ ಶಕ್ತಿಗಳನ್ನು ದಮನ ಮಾಡಲಾಗುತ್ತದೆ. ಹೀಗಾಗಿ ಈ ವರ್ಷ ಆಪ್ ನಾಯರು ಹೋಳಿ ಹಬ್ಬ ಆಚರಿಸುತ್ತಿಲ್ಲ ಎಂದು ಆತಿಶಿ ಹೇಳಿದ್ದಾರೆ. ಸರ್ವಾಧಿಕಾರಿ ಪ್ರಧಾನ ಮಂತ್ರಿ, ಪ್ರಜಾಪ್ರಭುತ್ವ, ಸಂವಿಧಾನ ಮಾರ್ಗದಲ್ಲಿ ನಡೆಯತ್ತಿದ್ದ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ಅವರನ್ನು ಬಂಧಿಸಿ ಜೈಲಿಗಟ್ಟಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ಆಪ್ ಅವಿರತ ಹೋರಾಟ ಮಾಡಲಿದೆ ಎಂದು ಅತಿಶಿ ಹೇಳಿದ್ದಾರೆ.
ಮಾರ್ಚ್ 22ರಂದು ಅರವಿಂದ್ ಕೇಜ್ರವಾಲ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬಳಿಕ ಅರವಿಂದ್ ಕೇಜಿವಾಲ್ ಬಂಧಿಸಲಾಗಿತ್ತು. ಅರವಿಂದ್ ಕೇಜ್ರವಾಲ್‍ಗೆ 9 ಸಮನ್ಸ್ ಪಡೆದಿದ್ದರೂ ಇಡಿ ವಿಚಾರಣೆಗೆ ಗೈರಾಗಿದ್ದರು. ಈ ಕರಿತು ಕೋರ್ಟ್ ಮೆಟ್ಟಿಲೇರಿದ್ದರು. ಬಂಧನದ ಬಳಿಕ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ 6 ದಿನಗಳ ಕಾಲ ಕೇಜಿವಾಲ್ ಅವರನ್ನು ಇಡಿ ಕಸ್ಟಡಿಗೆ ನೀಡಿದೆ.