ಸಮಗ್ರ ನ್ಯೂಸ್: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಉದ್ದೇಶಿತ ಅಬಕಾರಿ ನೀತಿ ಹಗರಣದ ವೇಳೆ ಬಳಕೆ ಮಾಡುತ್ತಿದ್ದ ಮೊಬೈಲ್ ನಾಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿರುವುದಾಗಿ ಮಾಹಿತಿ ತಿಳಿದು ಬಂದಿದೆ.
ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದರೆ, ಮೊಬೈಲ್ ಎಲ್ಲಿದೆ ಎಂಬುದು ಗೊತ್ತಿಲ್ಲ ಎಂಬುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಇ.ಡಿ ಮೂಲಗಳ ಪ್ರಕಾರ, ನಾಪತ್ತೆಯಾಗಿರುವ ಮೊಬೈಲ್‌ನಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿ ಇರಬಹುದು. ಇದು ಈವರೆಗೆ ಕಾಣೆಯಾದ 171ನೇ ಸಾಧನವಾಗಿದೆ. ಪತ್ತೆಯಾಗಿರುವ 17 ಮೊಬೈಲ್‌ಗಳಿಂದ ಮಾಹಿತಿ ಕಲೆಹಾಕಿದ ನಂತರ, ಇ.ಡಿ ತನಿಖೆ ವೇಗ ಪಡೆದಿದೆ. ಇವುಗಳಿಂದ ಲಭ್ಯವಾದ ಮಾಹಿತಿ ಆಧರಿಸಿ, ಮನೀಶ್ ಸಿಸೋಡಿಯಾ ಅವರ ಹೆಸರನ್ನು ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ.
ದಾಖಲೆ ನಾಶ ಮಾಡುವ ಸಲುವಾಗಿ, ನಾಪತ್ತೆಯಾಗಿರುವ ಮೊಬೈಲ್‌ಗಳನ್ನೂ ನಾಶ ಮಾಡಿರುವ ಸಾಧ್ಯತೆ ಇದೆ ಎಂದು ತನಿಖಾಧಿಖಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.