ಸಮಗ್ರ ನ್ಯೂಸ್: ವಾರದ ಹಿಂದೆಯಷ್ಟೇ ದಕ್ಷಿಣ ಕನ್ನಡ ಕೊಡಗು ಗಡಿ ಭಾಗದ ಕೂಜಿಮಲೆಯ ಎಸ್ಟೇಟ್ ಅಂಗಡಿಗೆ ಭೇಟಿ ನೀಡಿದ ಸಂಗೀತ ನಕ್ಸಲರು ಇದೀಗ ಕಡಪ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಅರಣ್ಯದಂಚಿನಲ್ಲಿ ಸುಳಿದಾಡಿದ್ದಾರೆ ಎಂದು ತಿಳಿದು ಬಂದಿದೆ.
ಕುಮಾರ ಪರ್ವತ ಸಾಲಿನ ಪಾಟಿ ಕುಮೇರಿ ದಟ್ಟ ಕಾಡಿಗೆ ಸಮೀಪದ ಮನೆ ಒಂದಕ್ಕೆ ಸಂಕಿತ ನಕ್ಸಲರು ಭೇಟಿ ನೀಡಿದ್ದರು ಎಂದು ಹೇಳಲಾಗಿದೆ ಮಾ.23ರಂದು ಕಾರ್ಮಿಕರೊಬ್ಬರ ಮನೆಗೆ ಭೇಟಿ ನೀಡಿದ್ದಾಗ ಕಾರ್ಮಿಕ ಪ್ರವೇಶ ನಿರಾಕರಿಸಿ ಬಾಗಿಲು ಬಂದ್ ಮಾಡಿದ್ದಾಗ ಸಂಕಿತ ನಕ್ಸಲರು ತೋಟದ ಮಾಲೀಕರ ಮನೆಗೆ ಹೋಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಕುಮಾರ ಪರ್ವತ ಸಾಲಿನ ಪಾಟಿ ಕುಮೇರಿ ದಟ್ಟ ಕಾಡಿನ ಮೂಲಕ ಸೋಮವಾರಪೇಟೆ ಮತ್ತು ಗಾಳಿಬೀಡು, ಸಂಪಾಚೆ ಮೂಲಕ ಕೇರಳದ ಅರಣ್ಯದೊಳಗೆ ಸಂಪರ್ಕ ಸಾಧಿಸಬಹುದಾಗಿದ್ದು ನಕ್ಸಲ್ ನಿಗ್ರಹದಳ ಕೊಂಬಿಂಗ್ ಕಾರ್ಯಾಚರಣೆ ಚುರುಕುಗೊಳಿಸಿದೆ. ಕಳೆದ ವಾರವಷ್ಟೇ ನಾಲ್ವರು ಶಂಕಿತ ನಕ್ಸಲರು ಕೂಜಿಮಲೆ ಕಾಣಿಸಿಕೊಂಡು ದಿನಸಿ ಸಾಮಾಗ್ರಿಗಳನ್ನು ಕೊಂಡೊಯ್ತಿದ್ದರು.