ಸಮಗ್ರ ನ್ಯೂಸ್ : ಪೆಟ್ರೋನೆಟ್ ಕಂಪೆನಿಗೆ ಸೇರಿದ ಡೀಸೆಲ್ ಪೈಪ್ ಲೈನ್ ಕೊರೆದು ಲಕ್ಷಾಂತರ ರೂಪಾಯಿ ಮೌಲ್ಯದ ಡೀಸೆಲ್ ಕಳವು ನಡೆಸಿದ ಘಟನೆ ಪುದುವೆಟ್ಟು ಗ್ರಾಮದ ಆಲಡ್ಕ ಎಂಬಲ್ಲಿ ನಡೆದಿದೆ.
ಈ ಬಗ್ಗೆ ಪೆಟ್ರೋನೆಟ್ ಎಚ್ ಬಿ ಲಿಮಿಟೆಡ್ ಕಂಪೆನಿಯ ನೆರಿಯಾ ಸ್ಟೇಶನ್ ಇನ್ ಚಾರ್ಜ್ ಆಗಿರುವ ರಾಜನ್ ಜಿ ಅವರು ಧಮಸ್ಥಳ ಪೊಲೀಸರಿಗೆ ದೂರು ನೀಡಿದ್ದು, ಮಂಗಳೂರು ಹಾಸನ ಮತ್ತು ಬೆಂಗಳೂರಿಗೆ ಪೆಟ್ರೋನೆಟ್ ಪೈಪ್ ಮೂಲಕ ಡಿಸೇಲ್ ಸರಬರಾಜು ಆಗುತ್ತಿದ್ದು, ಮಾ 16 ರಿಂದ 19 ರ ರಾತ್ರಿಯ ಮಧ್ಯದ ಅವಧಿಯಲ್ಲಿ ಡಿಸೇಲ್ ಪೈಪ್ ಲೈನ್ ಕೊರೆದ ಕಳ್ಳರು 2.5 ಇಂಚು ಎಚ್ ಡಿ ಪಿ ಇ ಪೈಪ್ ಮೂಲಕ ಅಂದಾಜು 12 ಸಾವಿರ ಲೀಟರ್‌ಗೂ ಅಧಿಕ ಡಿಸೇಲ್ ಕಳವು ಮಾಡಿದ್ದಾರೆ, ಕಳವಾಗಿರುವ ಡೀಸೆಲ್ ಅಂದಾಜು ಮೌಲ್ಯ 9.60 ಲಕ್ಷ ರೂಪಾಯಿ ಆಗಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸರು ತನಿಖೆ ಕೈಗೊಂಡಿದ್ದಾರೆ.