ಸಮಗ್ರ ನ್ಯೂಸ್: ಅಕ್ರಮ ಮದ್ಯ ನೀತಿ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ಬಂಧನದ ಕುರಿತು ಲೋಕಪಾಲ್ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದ ಸಾಮಾಜಿಕ ಹೋರಾಟಗಾರ, ಅರವಿಂದ್ ಕೇಜಿವಾಲ್ ಆಪ್ತರಾಗಿರುವ ಅಣ್ಣಾ ಹಜಾರೆ ಪ್ರತಿಕ್ರಿಯೆ ನೀಡಿದ್ದು, “ನನ್ನ ಜೊತೆ ಹಲವು ಹೋರಾಟದಲ್ಲಿ ಪಾಲ್ಗೊಂಡಿರುವ ಅರವಿಂದ್ ಕೇಜ್ರವಾಲ್ ಮದ್ಯದ ವಿರುದ್ಧ ಧ್ವನಿ ಎತ್ತಿದ್ದರು. ಹೋರಾಟ ಮಾಡಿದ್ದರು. ಆದರೆ ಈಗ ಅದೇ ಮದ್ಯ ನೀತಿ ಮಾಡಿ ಬಂಧನವಾಗಿದ್ದಾರೆ. ಕೇಜ್ರವಾಲ್ ಬಂಧನದಿಂದ ಬೇಸರವಾಗಿದೆ. ಈ ಬಂಧನ ಕೇಜಿವಾಲ್ ಸ್ವಯಂಕೃತ” ಎಂದಿದ್ದಾರೆ.
ಈಗ ಅವರೇನು ಮಾಡುತ್ತಾರೆ? ಅಧಿಕಾರದ ಮುಂದೆ ಏನೂ ನಡೆಯುವುದಿಲ್ಲ. ಈಗ ಬಂಧನವಾಗಿದೆ. ಇನ್ನು ಕಾನೂನು ಪ್ರಕಾರ ಏನು ಆಗಬೇಕು ಅದು ನಡೆಯಲಿದೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
2011ರಲ್ಲಿ ಅಣ್ಣಾ ಹಜಾರೆ ನಡೆಸಿದ ಲೋಕಪಾಲ ಬಿಲ್ ಜಾರಿಗೆ ಕುರಿತ ಉಪವಾಸ ಸತ್ಯಾಗ್ರಹದಲ್ಲಿ ಕಾಣಿಸಿಕೊಂಡ ಅರವಿಂದ್ ಕೇಜಿವಾಲ್ ಭಾರಿ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಅಣ್ಣಾ ಹಜಾರೆ ಜೊತೆಗೆ ಹಲವು ಹೋರಾಟದಲ್ಲಿ ಕೇಜ್ರವಾಲ್ ಮುಂಚೂಣಿಯಲ್ಲಿದ್ದರು. ಬಳಿಕ ಅಣ್ಣಾ ಹಜಾರೆಯಿಂದ ದೂರ ಸರಿದು ಆಮ್ ಆದ್ಮ ಪಾರ್ಟಿ ಕಟ್ಟಿ ಬೆಳೆಸಿದ ಅರವಿಂದ್ ಕೇಜಿವಾಲ್ ದೆಹಲಿ ಮುಖ್ಯಮಂತ್ರಿಯಾದರು.