ಸಮಗ್ರ ನ್ಯೂಸ್: ಅನಧಿಕೃತವಾಗಿ ಮನೆಯಲ್ಲಿ ಮಗು ಇಟ್ಟುಕೊಂಡ ಆರೋಪದ ಮೇಲೆ ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡನ್ನು ಬ್ಯಾಡರಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಗು ದತ್ತು ಪಡೆದಿರುವ ಬಗ್ಗೆ ಟ್ರೋಲ್ ಆಗಿದ್ದ ಸೋನು ಗೌಡ ಮಕ್ಕಳ ಹಕ್ಕು ಕಸದಿರುವ ಅರೋಪದ ಮೇಲೆ ಅರೆಸ್ಟ್ ಮಾಡಿದ್ದಾರೆ.
ಉತ್ತರ ಕರ್ನಾಟಕದ ಎಂಟು ವರ್ಷದ ಮಗುವನ್ನು ತನ್ನ ಬಲಿ ಇಟ್ಟಿಕೊಂಡಿರುವುದರಿಂದ ಮಕ್ಕಳ ರಕ್ಷಣ ಇಲಾಖೆ ಅಧಿಕಾರಿ ಗೀತಾ ದೂರು ನೀಡಿದ್ದರು.
ಮಗು ದತ್ತು ಪಡೆದಿರುವುದಾಗಿ ಸೋನು ಗೌಡ ಇತ್ತೀಚೆಗೆ ಹೇಳಿಕೊಂಡಿದ್ದರು. ಏಳು ವರ್ಷದ ಮಗುವನ್ನು ಕಾನೂನು ಬಾಹಿರವಾಗಿ ಅವರು ದತ್ತು ಪಡೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಜೆ.ಜೆ.ಆಯಕ್ಟ್ ಅಡಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ಬಂಧಿಸಿದ್ದಾರೆ
ಮಗುವನ್ನ ದತ್ತು ಪಡೆದು ಸಿಂಪತಿ ಗಿಟ್ಟಿಸಿಕೊಂಡು ಸೆಲೆಬ್ರಿಟಿ ಆಗಲು ಸೋನು ಸುಳ್ಳು ಪ್ರಚಾರ ಗಿಟ್ಟಿಸಿಕೊಳ್ಳಲುತ್ತಿದ್ದಾರೆ. ಹೀಗಾಗಿ ದತ್ತು ಪಡೆದುಕೊಳ್ಳಲು ಯಾವುದೇ ಕಾನೂನು ರೀತಿಯ ರೂಲ್ಸ್ ಪಾಲಿಸಿಲ್ಲ ಮಕ್ಕಳ ರಕ್ಷಣಾಧಿಕಾರಿಗಳು ದೂರಿನಲ್ಲಿ ಹೇಳಿದ್ದಾರೆ.
ಮಗು ದತ್ತು ಪಡೆಯಲು ಹಲವು ಪ್ರಕ್ರಿಯೆಗಳು ಇವೆ. ಆ ಪ್ರಕ್ರಿಯೆನ್ನು ಸೋನು ಶ್ರೀನಿವಾಸ್ ಗೌಡ ಪಾಲಿಸಿಲ್ಲ. ಹೀಗಾಗಿ ಸೋನು ಶ್ರೀನಿವಾಸ ಗೌಡ ಮಗುವನ್ನು ಪಡೆದಿರೋದು ಕಾನೂನು ಬಾಹೀರ ಆಗಿದೆ. ಮಗುವಿನ ಪಾಲಕರಿಗೆ ಹಲವು ಸೌಲಭ್ಯ ನೀಡಿದ್ದಾಗಿ ಸೋನು ಶ್ರೀನಿವಾಸ ಗೌಡ ಹೇಳಿಕೊಂಡಿದ್ದರು. ಹೀಗಾಗಿ, ಇದು ಮಗುವಿನ ಮಾರಾಟದಂತೆ ಕಂಡು ಬಂದಿದೆ ಎಂದು ದೂರುದಾರರು ಹೇಳಿದ್ದಾರೆ.