ಸಮಗ್ರ ನ್ಯೂಸ್: ಪಶ್ಚಿಮ ಬಂಗಾಳದ ಡಿಜಿಪಿ ಹುದ್ದೆಯಿಂದ ರಾಜೀವ್ ಕುಮಾರ್ ಅವರನ್ನು ವಜಾಗೊಳಿಸಿದ ನಂತರ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ವಿವೇಕ್ ಸಹಾಯ್ ಅವರನ್ನು ನೇಮಕ ಮಾಡಲಾಗಿದೆ.
ವಿವೇಕ್ ಸಹಾಯ್ ಅವರಿಗೆ ರಾಜ್ಯ ಪೊಲೀಸ್ ಮುಖ್ಯಸ್ಥರ ಜವಾಬ್ದಾರಿಯನ್ನು ನೀಡಲಾಗಿದ್ದು, ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ವಿವೇಕ್ ಸಹಾಯ್ ಅವರನ್ನು ರಾಜ್ಯಪಾಲರು ನೇಮಕ ಮಾಡಿದ್ದಾರೆ.
ವಿವೇಕ್ ಸಹಾಯ್ ಅವರು ಪಶ್ಚಿಮ ಬಂಗಾಳ ಕೇಡರ್‍ನ 1988 ಬ್ಯಾಚ್‍ನ ಐಪಿಎಸ್ ಅಧಿಕಾರಿ. ಅವರು ಈ ಹಿಂದೆ ಡೈರೆಕ್ಟರ್ ಜನರಲ್ (ಡಿಜಿ), ಪ್ರಾವಿಶನಿಂಗ್ ಮತ್ತು ಗೃಹರಕ್ಷಕರ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಸಹಾಯ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಭದ್ರತೆಯ ಉಸ್ತುವಾರಿಯನ್ನು ಸಹ ವಹಿಸಿದ್ದರು. ಆದರೆ 2021 ರ ಮಾರ್ಚ್ ನಲ್ಲಿ ಸಿಎಂ ಮೇಲಿನ ದಾಳಿಯ ನಂತರ ಅವರನ್ನು ಚುನಾವಣಾ ಆಯೋಗವು ಅಮಾನತುಗೊಳಿಸಿತು. ನಂತರ ಅವರನ್ನು ಭದ್ರತಾ ನಿರ್ದೇಶಕ ಹುದ್ದೆಗೆ ಭಡ್ತಿ ನೀಡಲಾಯಿತು.