ಸಮಗ್ರ ನ್ಯೂಸ್: ಲಕ್ಷದ್ವೀಪಕ್ಕೆ ಪ್ರವಾಸ ಹೋಗಬಯಸುವ ಜನರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಮಾರ್ಚ್ 31ರಿಂದ ಇಂಡಿಗೋ ಸಂಸ್ಥೆ ಲಕ್ಷದ್ವೀಪದ ಅಗತ್ತಿ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ನೇರ ಫೈಟ್ ಸೇವೆಯನ್ನು ನಡೆಸುತ್ತಿದೆ. ಈ ಮುಂಚೆ ಲಕ್ಷದ್ವೀಪಕ್ಕೆ ವಿಮಾನದ ಮೂಲಕ ಹೋಗಬೇಕೆಂದರೆ ಕನಿಷ್ಠ ಎರಡು ವಿಮಾನಗಳನ್ನಾದರೂ ಹತ್ತಬೇಕಿತ್ತು. ಕೊಚ್ಚಿ ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಬೇರೆ ಫೈಟ್‍ನಲ್ಲಿ ಲಕ್ಷದ್ವೀಪಕ್ಕೆ ಹೋಗಬೇಕಿತ್ತು.
ಸದ್ಯ ಲಕ್ಷದ್ವೀಪದಲ್ಲಿ ವಿಮಾನ ನಿಲ್ದಾಣ ಇರುವುದು ಅಗತ್ತಿ ದ್ವೀಪದಲ್ಲಿ ಮಾತ್ರ. ಮಿನಿಕಾಯ್ ದ್ವೀಪದಲ್ಲಿ ಇನ್ನೊಂದು ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಯನ್ನು ಸರ್ಕಾರ ಹಾಕಿದ್ದು, ಈ ವಿಮಾನ ನಿಲ್ದಾಣವನ್ನು ಮಿಲಿಟರಿ ವಾಯು ನೆಲೆಯಾಗಿ ಮಾಡಿಕೊಳ್ಳುವ ಸಾಧ್ಯತೆ ಇದೆ.
ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ಕೊಟ್ಟಾಗಿನಿಂದ ಅದು ಟ್ರೆಂಡಿಂಗ್‍ನಲ್ಲಿ ಇದ್ದು, ಲಕ್ಷದ್ವೀಪದತ್ತ ಭಾರತೀಯರ ಆಸಕ್ತಿ ಕೆರಳಿಸಿದೆ. ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಬಯಸುವರಲ್ಲಿ ಬಹಳಷ್ಟು ಜನರು ತಮ್ಮ ಪ್ಲಾನ್ ಬದಲಿಸಿ ಲಕ್ಷದ್ವೀಪದತ್ತ ಮನಸು ಮಾಡುತ್ತಿದ್ದು, ಲಕ್ಷದ್ವೀಪಕ್ಕೆ ವಿಮಾನ ಸೇವೆಗೆ ಬೇಡಿಕೆ ಹೆಚ್ಚುತ್ತಿದೆ.
ಸದ್ಯ ಬೆಂಗಳೂರಿನಿಂದ ಅಲಾಯನ್ಸ್ ಏರ್ ಮತ್ತು ಇಂಡಿಗೋ ಏರ್ಲೈನ್ಸ್ ಸಂಸ್ಥೆಗಳು ಮಾತ್ರವೇ ಲಕ್ಷದ್ವೀಪಕ್ಕೆ ವಿಮಾನ ಹಾರಾಟ ಸೇವೆ ನಡೆಸುತ್ತಿರುವುದು. ಬೆಂಗಳೂರಿನಿಂದ ಟಿಕೆಟ್ ಬೆಲೆ ಒಬ್ಬರಿಗೆ 11,000 ರೂನಿಂದ 15,000 ರೂ ಆಗುತ್ತದೆ. ಆದರೆ ಲಕ್ಷದ್ವೀಪಕ್ಕೆ ನಾನ್‍ಸ್ಟಾಪ್ ಇಂಡಿಗೋ ಫೈಟ್‍ನ ಟಿಕೆಟ್ ಬೆಲೆ ಕೇವಲ 6,999 ರೂ ಇದೆ. ಈ ವಿಮಾನದಲ್ಲಿ 78 ಸೀಟುಗಳು ಇರುತ್ತವೆ