ಪುತ್ತೂರು: ಕುತೂಹಲ ಕೆರಳಿಸಿದ್ದ SSLC ಪರೀಕ್ಷೆ ಸೋಮವಾರದಿಂದ ರಾಜ್ಯಾದ್ಯಂತ ನಡೆಯುತ್ತಿದೆ. ಕೊರೋನ ರಣಕೇಕೆಯ ಕಾರಣ ಪರೀಕ್ಷೆ ನಡೆಸಲು ಸರಕಾರ ಒಪ್ಪಿಗೆ ಸೂಚಿಸಿರಲಿಲ್ಲ. ವರ್ಷಂಪ್ರತಿ ಏಪ್ರೀಲ್ ಅಥವಾ ಮಾರ್ಚ್ ತಿಂಗಳಿನಲ್ಲಿ ರಾಜ್ಯದ್ಯಾಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯುತ್ತಿದ್ದವು. ಆದರೆ ಈ ಸಲ ಜುಲೈನಲ್ಲಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸೂಚಿಸಿದ್ದು ಇದಕ್ಕೆ ನ್ಯಾಯಾಲವು ಒಪ್ಪಿಗೆ ಸೂಚಿಸಿದೆ.
ಅದರಂತೆ ಪುತ್ತೂರು ತಾಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇಲ್ಲಿ ಇಲಾಖೆಯ ಆದೇಶದಂತೆ ಎಲ್ಲಾ ಮುಂಜಾಗ್ರತಾ ಸಿದ್ದತೆಗಳನ್ನು ಮಾಡಲಾಗಿದೆ. ಮಕ್ಕಳಿಗೆ ಸಾಮಾಜಿಕ ಅಂತರದಲ್ಲಿ ಪರೀಕ್ಷೆಯನ್ನು ಬರೆಸಲು ಸಕಲ ಸಿದ್ಧತೆಯನ್ನು ಸಿಬ್ಬಂದಿಗಳು ಮಾಡಿಕೊಂಡಿದ್ದು ಪರೀಕ್ಷಾ ಕೊಠಡಿಗಳ ಒಳಗೂ ಹಾಗೂ ಹೊರಗೂ ಸ್ಯಾನೀಟೈಜರ್ ಸಿಂಪಡಿಸಿ ಕಟ್ಟು ನಿಟ್ಟಿನ ಕ್ರಮಗಳನ್ನು ಪಾಲಿಸಲಾಗುತ್ತಿದೆ.
ಎರಡು ಐಸೋಲೇಸನ್ ಕೊಠಡಿಗಳ ವ್ಯವಸ್ಥೆ ಮಾಡಿರುವ ಈ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗುವ ವಿಧ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೇ ನಿರ್ಭಯವಾಗಿ ಪರೀಕ್ಷೆ ಬರೆಯಬೇಕು ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ವಿನೋದ್ ರವರು ತಿಳಿಸಿದ್ದಾರೆ
ಪುತ್ತೂರಿನ ಸಂತ ಫಿಲೋಮಿನಾ ಅನುದಾನಿತ ಪ್ರೌಢ ಶಾಲೆ ದರ್ಬೆ ಪುತ್ತೂರು ಇಲ್ಲಿ ಈಗಾಗಲೇ ಪರೀಕ್ಷಾ ಕೊಠಡಿಗಳು ಸಿದ್ದವಾಗಿವೆ.
ಇಲ್ಲಿ ಸರಿ ಸುಮಾರು 360 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 35 ಮೇಲ್ವಿಚಾರಕರು ಇರಲಿದ್ದಾರೆ.
ಈಗಾಗಲೇ ಪರೀಕ್ಷೆಗೆಂದು 30 + 2 ಕೊಠಡಿಗಳು ಸಿದ್ದವಾಗಿವೆ. ಇಲ್ಲಿ 2 ವಿಶೇಷ ಕೊಠಡಿ ಹಾಗೂ ಸ್ಕೌಟ್ ಮತ್ತು ವೈದ್ಯಕೀಯ ಸಿಬ್ಬಂದಿಗಳು ಕೊಠಡಿಗಳು ಮತ್ತು ಕೊಠಡಿ ಮೇಲ್ವಿಚಾರಕರಿಗೆ 1 ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಸರಕಾರದ ಸೂಚನೆಯಂತೆ ಒಂದು ಬೆಂಚ್ ನಲ್ಲಿ ಒಂದು ವಿದ್ಯಾರ್ಥಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಕೊಠಡಿಯೊಳಗೆ ಸ್ಯಾನಿಟೈಜರ್ ಸಿಂಪಡನೆ ಮಾಡಲಾಗಿದ್ದು ಪರೀಕ್ಷೆಗೆ ಬರೆಯುವ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಲಾಗುತ್ತದೆ ಎಂದು ಪ್ರೌಡ ಶಾಲೆಯ ಮುಖ್ಯ ಶಿಕ್ಷಕರು ತಿಳಿಸಿದ್ದಾರೆ