Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಜು.18 ರಿಂದ 24ರ ವರೆಗಿನ ಈ ವಾರದ ರಾಶಿ ಭವಿಷ್ಯ ಇಲ್ಲಿದೆ. ಈ ಭವಿಷ್ಯ ಗೋಚಾರ ಫಲವನ್ನು ಅವಲಂಬಿಸಿದ್ದು, ದೋಷಗಳಿಗೆ ಪರಿಹಾರವನ್ನು ಸೂಚಿಸಲಾಗಿದೆ. ಸಕಲರಿಗೂ ಈ ವಾರ ಶುಭತರಲಿ.

Ad Widget . Ad Widget .

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಉದ್ಯೋಗದಲ್ಲಿರುವವರಿಗೆ ಸಣ್ಣಪುಟ್ಟ ಅಡಚಣೆಗಳು ಬರಬಹುದು. ಖರ್ಚು ಅತಿಯಾಗಿ ಆರ್ಥಿಕ ಸಮತೋಲನದಲ್ಲಿ ಏರುಪೇರು ಆಗಬಹುದು. ಒಡಹುಟ್ಟಿದವರ ವಿಶ್ವಾಸವನ್ನು ಕಾಪಾಡಿಕೊಳ್ಳುವುದು ನಿಮಗೆ ಉತ್ತಮ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣಬಹುದು. ಕೃಷಿ ಭೂಮಿಯನ್ನು ಕೊಳ್ಳುವುದರಲ್ಲಿ ಸಫಲರಾಗುವಿರಿ. ಮುದ್ರಣ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ವಿಪುಲ ಅವಕಾಶಗಳು ದೊರೆಯುತ್ತವೆ. ವಾರ್ತಾ ಬರಹಗಾರರಿಗೆ ಬೇಡಿಕೆ ಬಂದು ಉತ್ತಮ ಲೇಖನಗಳು ಹೊರಬರುತ್ತವೆ. ರಂಗಭೂಮಿಯ ನಟರಿಗೆ ಸಿನಿಮಾ ಕ್ಷೇತ್ರದಲ್ಲಿ ಅವಕಾಶ ದೊರೆಯುತ್ತದೆ ಮತ್ತು ಸಂಪಾದನೆ ಹೆಚ್ಚಾಗುತ್ತದೆ.
ಕಬ್ಬಿಣದ ಕೆಲಸ ಮಾಡುವವರಿಗೆ ಹೆಚ್ಚಿನ ಕೆಲಸ ದೊರೆತು ಸಂಪಾದನೆ ಹೆಚ್ಚುತ್ತದೆ.

Ad Widget . Ad Widget .

**
ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ತಾಂತ್ರಿಕ ಪರಿಣತರಿಗೆ ಉತ್ತಮ ಕೆಲಸಗಳು ದೊರೆತು ಸಂಪಾದನೆ ಹೆಚ್ಚುತ್ತದೆ. ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಮನೆ ನಿರ್ಮಾಣ ಮಾಡಬೇಕೆನ್ನುವವರಿಗೆ ಹಣ ಹೊಂದಿಕೆಯಾಗುತ್ತದೆ. ಆದಾಯದ ಹೊಸ ಮೂಲ ಗೋಚರವಾಗುತ್ತದೆ. ಅದನ್ನು ಸರಿಯಾಗಿ ಬಳಸಿಕೊಳ್ಳಿ. ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಸಾಕಷ್ಟು ಶ್ರಮವಹಿಸಬೇಕು. ಬೇಳೆಕಾಳು ಮೊದಲಾದ ದ್ವಿದಳ ಧಾನ್ಯಗಳ ಮಾರಾಟಗಾರರಿಗೆ ವ್ಯಾಪಾರ ವೃದ್ಧಿಯಾಗುತ್ತದೆ. ವ್ಯವಹಾರದಲ್ಲಿ ಹೆಚ್ಚು ಮಾತನಾಡುವುದಕ್ಕಿಂತ ಮೌನವಾಗಿರುವುದು ಲೇಸು. ನಿಮ್ಮ ಅಭಿಪ್ರಾಯವನ್ನು ಹೇಳುವ ಮೊದಲು ಜಾಗರೂಕತೆಯನ್ನು ವಹಿಸಿರಿ. ಆದಾಯವು ನಿಮ್ಮ ಅಗತ್ಯತೆ ಪೂರೈಸುತ್ತದೆ.

**
ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)


ಸೌಂದರ್ಯವರ್ಧಕಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು. ಕೃಷಿಕರಿಗೆ ಬರಬೇಕಿದ್ದ ಸಹಾಯಧನಗಳು ಸಿಗುತ್ತವೆ. ವಾಹನ ರಿಪೇರಿಗಾಗಿ ಹಣ ಖರ್ಚಾಗುವುದು. ಉದ್ಯೋಗದಲ್ಲಿ ಚಾಣಾಕ್ಷತೆಯನ್ನು ಮೆರೆದು ಯಶಸ್ಸನ್ನು ನಿಮ್ಮದಾಗಿಸಿಕೊಳ್ಳುವಿರಿ. ಮುಂದಾಲೋಚನೆಯಿಂದ ತೆಗೆದುಕೊಂಡ ನಿರ್ಧಾರಗಳು ಈಗ ಫಲ ಕೊಡುತ್ತವೆ. ಸೋದರಿಯರ ಸಹಕಾರ ನಿಮಗೆ ಅಗತ್ಯವಾಗಿ ದೊರಕುತ್ತದೆ. ನಿಮ್ಮ ನಿಶ್ಚಿತ ಗುರಿಗಾಗಿ ಪ್ರಯತ್ನ ಮಾಡಲೇಬೇಕು. ಖಾದ್ಯ ತೈಲಗಳನ್ನು ಮಾರುವವರ ವ್ಯವಹಾರ ವಿಸ್ತರಣೆಯಾಗಿ ಲಾಭ ಬರುತ್ತದೆ. ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡುವಿರಿ ಹಾಗೂ ಕೆಲವರಿಗೆ ಮಾರ್ಗದರ್ಶಕರಾಗುವಿರಿ.

**
ಕಟಕ ರಾಶಿ (ಪುನರ್ವಸು 4 ಪುಷ್ಯಆಶ್ಲೇಷ )


ಈ ವಾರ ಉತ್ತಮ ಆದಾಯವನ್ನು ನಿರೀಕ್ಷಿಸಬಹುದು, ಹಾಗೆಯೇ ಮನೆಯ ಖರ್ಚಿನಲ್ಲಿ ಏರಿಕೆಯಾಗಲಿದೆ. ಉದ್ಯೋಗಸ್ಥ ಮಹಿಳೆಯರು ವಿನಾಕಾರಣ ವರ್ಗಾವಣೆಯನ್ನು ನಿರೀಕ್ಷಿಸಬಹುದು. ವಾಹನಗಳ ಮಾರಾಟದ ವ್ಯವಹಾರದಲ್ಲಿ ಸ್ವಲ್ಪ ಹಿನ್ನಡೆಯನ್ನು ಕಾಣಬಹುದು. ಆದರೂ ವ್ಯವಹಾರದಲ್ಲಿ ನಷ್ಟವೇನಿಲ್ಲ. ಇದ್ದ ಮಾನಸಿಕ ಕಿರಿಕಿರಿಗಳು ದೂರವಾಗುತ್ತದೆ. ಮಹಿಳಾ ರಾಜಕಾರಣಿಗಳಿಗೆ ಅವರ ಪಕ್ಷದಲ್ಲಿ ಘನತೆ ಗೌರವಗಳು ಪ್ರಾಪ್ತಿಯಾಗುತ್ತವೆ. ವೃತ್ತಿಯಲ್ಲಿನ ಬಡ್ತಿಗಾಗಿ ಹೆಚ್ಚಿನ ಪೈಪೋಟಿಯನ್ನು ಎದುರಿಸಬೇಕಾಗುತ್ತದೆ. ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶಗಳು ದೊರೆತು ಪ್ರಬಲ ಸ್ಪರ್ಧೆ ನೀಡುವ ಸಂದರ್ಭಗಳಿವೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಮುನ್ನಡೆಯನ್ನು ಕಾಣಬಹುದು.

**
ಸಿಂಹ ರಾಶಿ ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)


ಸ್ವಲ್ಪ ಧನಾದಾಯ ಹೆಚ್ಚಾಗಿ ಹೊಸ ವಸ್ತ್ರಗಳನ್ನು ಕೊಳ್ಳುವ ಸಾಧ್ಯತೆ ಇದೆ. ಮನೆಯವರೊಂದಿಗೆ ಸಂತೋಷಕೂಟವನ್ನು ಆಚರಿಸಿಕೊಳ್ಳುವಿರಿ. ಕಚೇರಿಗಳಲ್ಲಿ ಕೆಲಸ ಮಾಡುವಾಗ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಿ ಆಯಾಸವೆನಿಸುತ್ತದೆ. ಕೋರ್ಟ್‌ ಕಚೇರಿ ಕೆಲಸಗಳಲ್ಲಿ ನಿಧಾನಗತಿ ಆದರೂ ಹಿನ್ನಡೆ ಇರುವುದಿಲ್ಲ. ಉದ್ಯೋಗ ಸ್ಥಳದಲ್ಲಿ ಇದ್ದ ಕಲಹಗಳು ಇತ್ಯರ್ಥವಾಗುತ್ತವೆ. ತಾಂತ್ರಿಕ ಸಲಹೆಗಾರರಿಗೆ ಸೂಕ್ತ ಜವಾಬ್ದಾರಿಯುತ ಸ್ಥಾನ ದೊರೆತು ಅವರ ಸಲಹೆಗಳಿಗೆ ಹೆಚ್ಚಿನ ಬೆಲೆ ಬರುತ್ತದೆ. ರಾಜಕೀಯ ವ್ಯಕ್ತಿಗಳು ಹೆಚ್ಚಿನ ಓಡಾಟದಲ್ಲಿ ತೊಡಗಿಕೊಳ್ಳಬೇಕಾದೀತು. ಬಣ್ಣಗಳನ್ನು ಉತ್ಪಾದಿಸುವವರಿಗೆ ಬೇಡಿಕೆ ಹೆಚ್ಚಾಗುತ್ತದೆ, ಹಾಗೂ ವ್ಯವಹಾರ ವಿಸ್ತರಣೆಯಾಗಿ ಲಾಭ ಹೆಚ್ಚುತ್ತದೆ.

**
ಕನ್ಯಾ ರಾಶಿ ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1 2)


ನಿಶ್ಚಿತ ಆದಾಯ ಬರುವ ಸೂಚನೆ ಇದ್ದರೂ ಹಣ ಬರುವಲ್ಲಿ ವಿಳಂಬವಾಗುತ್ತದೆ. ಖರ್ಚುಗಳ ಬಗ್ಗೆ ಹಿಡಿತ ಇರಲಿ. ನಿಮ್ಮ ಮುಂದಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮುಂಚೆ ಆ ಯೋಜನೆಗಳ ಆದ್ಯತಾ ಪಟ್ಟಿಯನ್ನು ತಯಾರಿಸಿಕೊಂಡು ಅದರಂತೆ ಜಾರಿಗೊಳಿಸಿರಿ. ಕಚೇರಿಯಲ್ಲಿ ಚುರುಕಿನಿಂದ ಕೆಲಸ ಕಾರ್ಯಗಳನ್ನು ಮಾಡಿ ಸಾಧನೆಗೆ ಪಾತ್ರರಾಗುವಿರಿ. ಮಕ್ಕಳ ಚಲನವಲನಗಳ ಮೇಲೆ ಕಣ್ಣಿಡುವುದು ನಿಮಗೆ ಅನುಕೂಲವಾಗುತ್ತದೆ. ಕೃಷಿಕರಿಗೆ ನಿರೀಕ್ಷಿತ ಮಟ್ಟದ ಆದಾಯವಿರುತ್ತದೆ. ಹೃದಯ ಸಂಬಂಧಿ ಕಾಯಿಲೆಗಳಿರುವವರು ಎಚ್ಚರವಹಿಸುವುದು ಒಳ್ಳೆಯದು. ಸಂಗಾತಿಯ ಆದಾಯದಲ್ಲಿ ಅಷ್ಟೇನೂ ಏರಿಕೆ ಇರುವುದಿಲ್ಲ. ಸಂಗೀತಗಾರರಿಗೆ ಉತ್ತಮ ಸಂಭಾವನೆ ದೊರಕುವ ಸಾಧ್ಯತೆ ಇದೆ ಹಾಗೂ ಉತ್ತಮ ವೇದಿಕೆಗಳಲ್ಲಿ ಹಾಡಲು ಅವಕಾಶ ದೊರೆಯುತ್ತವೆ.

**
ತುಲಾ ರಾಶಿ ( ಚಿತ್ತಾ 3 4 ಸ್ವಾತಿ ವಿಶಾಖ 1 2 3)


ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಾಧ್ಯತೆಗಳಿವೆ. ಇದರ ಆಯೋಜನೆಯಲ್ಲಿ ಸಾಕಷ್ಟು ಸಣ್ಣ ಮಾತುಗಳು ಬರಬಹುದು, ತಾಳ್ಮೆಯಿಂದ ಇದ್ದಲ್ಲಿ ಯಶಸ್ಸು ನಿಮ್ಮದಾಗಿರುತ್ತದೆ. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳ ಕಚೇರಿಯಲ್ಲಿ ದಿನವಿಡೀ ಕಾಲಹರಣ ಮಾಡಬೇಕಾದ ಅನಿವಾರ್ಯ ಇರುತ್ತದೆ. ಬರಬೇಕಾಗಿದ್ದ ಬಾಕಿ ಹಣ, ಸಾಲವನ್ನು ಈಗ ವಸೂಲಿ ಮಾಡಬಹುದು. ಅತಿಯಾದ ಉತ್ಸಾಹದಿಂದ ನಿಮ್ಮ ವೃತ್ತಿಜೀವನದಲ್ಲಿ ಹೊಸ ತಿರುವನ್ನು ಪಡೆಯುವಿರಿ. ಕೃಷಿ ಉತ್ಪನ್ನಗಳಿಂದ ಹೆಚ್ಚಿನ ಹಣವನ್ನು ಪಡೆಯುವಿರಿ. ಆದಾಯ ಕಡಿಮೆ ಇರುವುದರಿಂದ ಖರ್ಚಿಗೆ ಕಡಿವಾಣ ಹಾಕಿರಿ. ಯಾವುದೇ ವಿಚಾರದಲ್ಲೂ ಅತಿಯಾದ ಕಲ್ಪನೆ ಅಷ್ಟು ಒಳಿತಲ್ಲ.

**
ವೃಶ್ಚಿಕ ರಾಶಿ ( ವಿಶಾಖಾ 4 ಅನುರಾಧ ಜೇಷ್ಠ)


ಸಂಸಾರದಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲಗಳು ಆಗಬಹುದು, ಸಂಗಾತಿಯೊಡನೆ ಚರ್ಚಿಸಿ ನಂತರ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಆರ್ಥಿಕ ಸ್ಥಿತಿಯು ಉತ್ತಮವಾಗಿರುವುದಿಲ್ಲ. ಯಾರದೋ ಮಾತು ಕೇಳಿ ಸಿಕ್ಕಸಿಕ್ಕಲ್ಲಿ ಹಣ ಹೂಡುವುದು ಬೇಡ, ಸರಿಯಾಗಿ ಅರಿತು ಹಣ ಹೂಡಿರಿ. ವ್ಯಾಪಾರ ವಹಿವಾಟಿನಲ್ಲಿ ಸ್ವಲ್ಪ ಲಾಭ ಬರುತ್ತದೆ. ನ್ಯಾಯವಾದಿಗಳು ತಮ್ಮ ಎದುರಾಳಿಯನ್ನು ಚಾಣಾಕ್ಷತನದಿಂದ ಮಣಿಸಿ ಗೆಲುವನ್ನು ಸಾಧಿಸುವರು. ಭಾರಿ ವಾಹನಗಳನ್ನು ಚಾಲನೆ ಮಾಡುವಾಗ ಎಚ್ಚರವಿರಲಿ. ಸ್ವಂತ ಆರೋಗ್ಯದ ಕಡೆಗೆ ಗಮನವಿರಲಿ.

**
ಧನಸ್ಸು ರಾಶಿ ( ಮೂಲ ಪೂರ್ವಾಷಾಢ ಉತ್ತರಾಷಾಢ 1)


ಆಸ್ತಿಗೆ ಸಂಬಂಧಿಸಿದ ವ್ಯವಹಾರಗಳ ಬಗ್ಗೆ ಹಿರಿಯರು ಜಾಗ್ರತೆ ವಹಿಸುವುದು ಉತ್ತಮ. ಸ್ತ್ರೀಯರಿಗೆ ಒಡವೆಗಳನ್ನು ಕೊಳ್ಳುವ ಆಸಕ್ತಿ ಇರುತ್ತದೆ. ಸರ್ಕಾರಿ ಕೆಲಸಗಳ ಮಧ್ಯವರ್ತಿಗಳಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ಕಾಯುತ್ತಿದ್ದ ಹೊಸ ಉದ್ಯೋಗದ ಆದೇಶದ ಪ್ರತಿಯು ದೊರೆಯುತ್ತದೆ. ಶಿಕ್ಷಕ ವೃತ್ತಿಯಲ್ಲಿ ಇರುವವರಿಗೆ ಸಣ್ಣಪುಟ್ಟ ಅಪವಾದಗಳು ಬರುವ ಸಾಧ್ಯತೆಗಳಿವೆ ಎಚ್ಚರವಾಗಿರಿ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಕೆಲಸ ಕಾರ್ಯಗಳನ್ನು ಸರಿಯಾಗಿ ಗಮನವಿಟ್ಟು ಮಾಡಿದಲ್ಲಿ ಯಶಸ್ಸು ನಿಮ್ಮದೇ ಆಗಿರುತ್ತದೆ. ಆಶ್ವಾಸನೆಗಳನ್ನು ಕೊಡುವಾಗ ರಾಜಕೀಯ ನಾಯಕರು ಬಹಳ ಎಚ್ಚರದಿಂದಿರಿ. ವಿದೇಶಿ ವ್ಯವಹಾರಗಳನ್ನು ಮಾಡುವಾಗ ನಿಮ್ಮ ಹಳೆಯ ಅನುಭವವನ್ನು ಸಾಕಷ್ಟು ಬಳಸಿಕೊಳ್ಳಿರಿ.

**
ಮಕರ ರಾಶಿ ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)


ನಿಮ್ಮ ವಿಶ್ವಾಸಿಗಳಿಂದಲೇ ಮೋಸಹೋಗುವ ಸಾಧ್ಯತೆಗಳಿವೆ, ಈ ಬಗ್ಗೆ ಎಚ್ಚರವಹಿಸಿ. ಕೌಟುಂಬಿಕ ಕೆಲಸಗಳಲ್ಲಿ ಅತ್ಯಂತ ಜವಾಬ್ದಾರಿ ಮತ್ತು ದಕ್ಷತೆಯನ್ನು ಮೆರೆಯುವಿರಿ. ಈ ಬಗ್ಗೆ ಹಿರಿಯರು ಬಹಳ ಮೆಚ್ಚುಗೆಯನ್ನು ವ್ಯಕ್ತಪಡಿಸುವರು. ಹೊಸ ಉದ್ಯೋಗದ ಅವಕಾಶಗಳು ಒದಗಿಬರುತ್ತವೆ. ಅನಿರೀಕ್ಷಿತ ಬೆಳವಣಿಗೆಯಿಂದ ಉದ್ಯೋಗದಲ್ಲಿ ಹೆಚ್ಚಿನ ಅಧಿಕಾರ ದೊರೆಯಬಹುದು. ವಾಣಿಜ್ಯ ವ್ಯವಹಾರಗಳಲ್ಲಿ ಸ್ವಲ್ಪ ಯಶಸ್ಸು ದೊರೆತು ಲಾಭವನ್ನು ಕಾಣಬಹುದು. ಕೋರ್ಟ್‌ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆಯನ್ನು ಕಾಣಬಹುದು. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಅಸಹಾಯಕರಿಗೆ ಸಹಾಯಹಸ್ತ ಚಾಚುವ ಮೂಲಕ ತೃಪ್ತಿ ಪಡುವಿರಿ. ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯುವ ಕಾಲ.

**
ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)


ತರಕಾರಿ ಬೆಳೆಯುವ ಕೃಷಿಕರಿಗೆ ಉತ್ತಮ ಬೆಲೆ ದೊರೆತು ಸಂತಸವಾಗುತ್ತದೆ. ಸಮಾಜವು ಹೆಮ್ಮೆ ಪಡುವ ಕೆಲಸಗಳನ್ನು ಹಿರಿಯರು ಮಾಡಿ ಆತ್ಮತೃಪ್ತಿಯನ್ನು ಹೊಂದುವರು. ಸೋದರಿಯರ ನಡುವೆ ಬಿರುಕುಬಿಟ್ಟಿದ್ದ ಸಂಬಂಧಗಳು ಪುನರ್ ಸ್ಥಾಪನೆಗೊಂಡು ಸಂಬಂಧ ಗಟ್ಟಿಯಾಗುವುದು. ಲಲಿತಕಲಾ ಪರಿಣತರಿಗೆ ಉತ್ತಮ ಅವಕಾಶವೊಂದು ತೆರೆದುಕೊಳ್ಳುವ ಸಾಧ್ಯತೆ ಇದೆ ಮತ್ತು ಧನ ಸಂಪಾದನೆಗೆ ಹೆಚ್ಚಿನ ದಾರಿ ಮಾಡಿಕೊಡುತ್ತದೆ. ಸಾಹಸ ಕಲಾವಿದರು ನಟನೆಯನ್ನು ಮಾಡುವಾಗ ಎಚ್ಚರವಾಗಿರಿ ಅಪಘಾತದ ಸಾಧ್ಯತೆಗಳಿವೆ. ಯುವಕರಿಗೆ ತಾಯಿಯು ಧನ ಸಹಾಯ ಮಾಡುವ ಸಾಧ್ಯತೆ ನಿಚ್ಚಳವಾಗಿದೆ. ಮಕ್ಕಳ ಅಭಿವೃದ್ಧಿಯು ನಿಮ್ಮ ನಿರೀಕ್ಷೆಯಂತೆ ಇರುತ್ತದೆ.

**
ಮೀನ ರಾಶಿ ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)


ಆಕಸ್ಮಿಕ ಧನಲಾಭವನ್ನು ನಿರೀಕ್ಷಿಸಬಹುದು. ಎಲ್ಲರ ಮಧ್ಯೆ ಹೊಗಳಿಕೊಳ್ಳುವ ನಿಮ್ಮ ಗುಣ ಅಪಹಾಸ್ಯಕ್ಕೆ ಕಾರಣವಾಗಬಹುದು. ಕೆಲವರಿಗೆ ಗುಪ್ತ ರೋಗಗಳು ಕಾಡಬಹುದು. ಹಳೆಯ ವೈಷಮ್ಯಗಳನ್ನು ಕೆದಕುವ ಬದಲು ಪರಿಹಾರ ಕಂಡುಕೊಳ್ಳುವತ್ತ ಸ್ವಲ್ಪ ಆಲೋಚಿಸುವುದು ಒಳಿತು. ರಾಸಾಯನಿಕ ವಸ್ತುಗಳ ಮಾರಾಟಗಾರರಿಗೆ ಹೆಚ್ಚಿನ ಲಾಭವಿರುತ್ತದೆ. ಆಭರಣಗಳನ್ನು ತಯಾರಿಸಿ ರಫ್ತು ವ್ಯಾಪಾರ ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು. ಸಾಮಾಜಿಕ ಕೆಲಸಗಳಲ್ಲಿ ಆಸಕ್ತಿ ಕಳೆದುಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ. ಕಬ್ಬಿಣದ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರೆಯುತ್ತದೆ.

Leave a Comment

Your email address will not be published. Required fields are marked *