ಸಮಗ್ರ ನ್ಯೂಸ್: ಆನ್‌ಲೈನ್ ಸ್ಟಾಕ್ ಟ್ರೇಡಿಂಗ್ ಆ್ಯಪ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ವಂಚಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಗರದ ಅಶೋಕ ನಗರದ ನಿವಾಸಿಯೋರ್ವರು ಫೇಸ್‌ಬುಕ್ ನೋಡುತ್ತಿದ್ದಾಗ ಅದರಲ್ಲಿ ಆನ್‌ಲೈನ್ ಸ್ಟಾಕ್ ಟ್ರೇಡಿಂಗ್ ಆ್ಯಪ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ ಹೆಚ್ಚಿನ ಲಾಭಾಂಶ ಗಳಿಸಬಹುದು ಎಂಬ ಸಂದೇಶವಿತ್ತು. ಅದರಲ್ಲಿದ್ದ ಲಿಂಕ್ ತೆರೆದು ವಾಟ್ಸ್ ಆ್ಯಪ್ ಗ್ರೂಪ್‌ವೊಂದಕ್ಕೆ ಸೇರ್ಪಡೆಗೊಂಡಿದ್ದರು. ಬಳಿಕ ಅದರಲ್ಲಿ ಬಂದ ಸೂಚನೆಯಂತೆ ಹಂತ ಹಂತವಾಗಿ ಹಣ ಹೂಡಿಕೆ ಮಾಡಿದ್ದರು.
ಆದರೆ ಯಾವುದೇ ಲಾಭಾಂಶ ನೀಡಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಲಾಭಾಂಶ ನೀಡಬೇಕಾದರೆ ತೆರಿಗೆ ಪಾವತಿ ಮಾಡಬೇಕೆಂದು ಸೂಚಿಸಲಾಯಿತು ಅದನ್ನು ನಂಬಿ ಮತ್ತಷ್ಟು ಹಣ ಹೂಡಿಕೆ ಮಾಡಿದರು. ಆದರೆ ಅವರಿಗೆ ಯಾವುದೇ ಹಣ ವಾಪಸ್ ನೀಡಲಿಲ್ಲ. ಅವರಿಂದ ಜ.16ರಿಂದ ಫೆ.3ರ ವರೆಗೆ ಒಟ್ಟು 39.40 ಲ.ರೂ.ಗಳನ್ನು ಅಪರಿಚಿತರು ಹೂಡಿಕೆ ನೆಪದಲ್ಲಿ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.