ಸಮಗ್ರ ನ್ಯೂಸ್: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದು, ಅದರಲ್ಲಿ ಗೃಹ ಜ್ಯೋತಿ ಯೋಜನೆ ಮೂಲಕ ಪ್ರತಿ ಮನೆ ಮನೆಗೆ 200 ಯೂನಿಟ್‌ವರೆಗೆ ಬಳಕೆಗೆ ಅವಕಾಶವನ್ನು ಕೊಡಲಾಗುತ್ತಿದೆ. ಆದರೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಭಾರಿ ನಷ್ಟದಲ್ಲಿದೆ ಎಂಬ ಸಂಗತಿ ಹೊರಬಿದ್ದಿದೆ. ಅಷ್ಟೇ ಅಲ್ಲದೆ, ತನ್ನ ಯಂತ್ರೋಪಕರಣಗಳನ್ನೇ ಅಡವಿಟ್ಟು ಈವರೆಗೆ ಕೋಟಿ ಕೋಟಿ ಹಣವನ್ನು ಪಡೆಯಲಾಗಿದೆ. ಈ ವರ್ಷವೊಂದರಲ್ಲಿಯೇ ಬರೋಬ್ಬರಿ 33 ಸಾವಿರ ಕೋಟಿ ರೂಪಾಯಿ ಸಾಲವನ್ನು ಪಡೆಯಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಬ್ಯಾಂಕ್‌ನಲ್ಲಿ ಯಂತ್ರೋಪಕರಣಗಳನ್ನು ಅಡಮಾನವಿಟ್ಟು ಸಾವಿರಾರು ಕೋಟಿ ಸಾಲ ಪಡೆದುಕೊಂಡಿದೆ. ಆದ್ರೆ ಸರ್ಕಾರದ ಫ್ರೀ ಯೋಜನೆಯ ವೆಚ್ಚವನ್ನು ಸರಿದೂಗಿಸಲು ಸಾಲ ಮಾಡಲಾಗುತ್ತಿದೆಯೇ? ಎಂಬ ಪ್ರಶ್ನೆಯೂ ಮೂಡಿದೆ.