ಸಮಗ್ರ ನ್ಯೂಸ್: ಹಣಕ್ಕಾಗಿ ಬಾಲಕಿಗೆ ಇಸ್ತ್ರಿಯಿಂದ ಸುಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿಡಘಟ್ಟೆ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದು, ಬ್ಯಾಂಕ್ನಲ್ಲಿದ್ದ ಹಣಕ್ಕಾಗಿ ದೊಡ್ಡಮ್ಮ ಇಸ್ತ್ರಿ ಪೆಟ್ಟಿಗೆಯಿಂದ ಐದನೇ ತರಗತಿಯಲ್ಲಿ ಓದುತ್ತಿದ್ದ ಮಗಳ ತೊಡೆ ಸುಟ್ಟಿದ್ದಾಳೆ.
ತುಮಕೂರು ತಾಲೂಕಿನ ಪೂಜಾರಹಳ್ಳಿ ಗ್ರಾಮದ ನಿವಾಸಿಯಾಗಿರುವ ಬಾಲಕಿ ಲಕ್ಷ್ಮೀಗೆ ದೊಡ್ಡಮ್ಮ ನರಸಮ್ಮ ಕಿರುಕುಳ ನೀಡಿದ್ದಾರೆ. ಲಕ್ಷ್ಮೀಯ ತಾಯಿ ನರಸಮ್ಮ ಕಳೆದ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಮೃತ ತಾಯಿ ನರಸಮ್ಮ ಹಾಗೂ ಬಾಲಕಿ ಲಕ್ಷ್ಮೀ ಹೆಸರಿನಲ್ಲಿ ಜಂಟಿ ಖಾತೆ ಇತ್ತು. ಮೃತ ತಾಯಿ ತನ್ನ ಮಗಳಿಗಾಗಿ ನಾಲ್ಕು ಲಕ್ಷ ಫಿಕ್ಸ್ ಡೆಪಾಸಿಟ್ ಮಾಡಿದ್ದರು. ಇದು ನರಸಮ್ಮನ ಕಣ್ಣಿಗೆ ಬಿದ್ದಿದೆ. ಹೀಗಾಗಿ ನರಸಮ್ಮ ಶಿವರಾತ್ರಿ ಹಬ್ಬಕ್ಕೆಂದು ಲಕ್ಷ್ಮೀಯನ್ನು ತಮ್ಮ ಊರಿಗೆ ಕರೆಸಿದ್ದಾಳೆ. ಬಳಿಕ ನರಸಮ್ಮ ಚೆಕ್ಗೆ ಸಹಿ ಮಾಡು ಅಂತ ಬಾಲಕಿ ಲಕ್ಷ್ಮೀಗೆ ಕಿರುಕುಳ ನೀಡಿದ್ದಾಳೆ. ಆದರೂ ಬಾಲಕಿ ಲಕ್ಷ್ಮೀ ಒಪ್ಪದಿದ್ದಾಗ ನರಸಮ್ಮ ಇಸ್ತ್ರಿ ಪೆಟ್ಟಿಗೆಯಿಂದ ಬಾಲಕಿ ಲಕ್ಷ್ಮೀ ತೊಡೆಗೆ ಸುಟ್ಟಿದ್ದಾಳೆ. ಬಾಲಕಿ ಕಿರುಚದಂತೆ ನಂಜಮ್ಮ ಮಗ ಬಸವರಾಜ್ ಆಕೆಯ ಬಾಯಿ ಮುಚ್ಚಿದ್ದಾನೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಕಿ ಲಕ್ಷ್ಮೀಗೆ ಪರೀಕ್ಷೆ ನಡೆಯುತ್ತಿದ್ದು, ಸೋಮವಾರ ಪರೀಕ್ಷೆಗೆ ಹಾಜರಾಗಿರಲಿಲ್ಲ. ಹೀಗಾಗಿ ಶಿಕ್ಷಕರು ಮತ್ತು ಸಂಬಂಧಿಕರು ಬಾಲಕಿಯನ್ನು ಊರಿಗೆ ಕರೆಸಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ.