Ad Widget .

ಬಸವೇಶ್ವರನಗರದ ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ: ನಾಲ್ವರಿಗೆ ಗಾಯ

ಸಮಗ್ರ ನ್ಯೂಸ್:ಬೆಂಗಳೂರಿನ ಬಸವೇಶ್ವರನಗರದ ಗ್ಯಾರೇಜ್‌ನಲ್ಲಿ ಇಂದು ಸಂಜೆ ಅಗ್ನಿ ಅವಘಡ ಸಂಭವಿಸಿದು, ಗ್ಯಾರೇಜ್ ಮಾಲೀಕ ಜಾರ್ಜ್ ಹಾಗೂ ಕೆಲಸಗಾರ ಶಿವು ಸೇರಿದಂತೆ ನಾಲ್ವರಿಗೆ ಗಾಯವಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸ್ಫೋಟದಿಂದ 2 ಅಂತಸ್ತಿನ ಮನೆಗೂ ಹಾನಿಯಾಗಿದ್ದು, ಸ್ವಿಫ್ಟ್ ಡಿಸೈರ್ ಕಾರು, ದ್ವಿಚಕ್ರ ವಾಹನ ಸಂಪೂರ್ಣ ಹಾನಿಯಾಗಿದೆ. ಬೆಂಕಿ ಆವರಿಸಿದರಿಂದ ರಸ್ತೆಯಲ್ಲಿ ಹೋಗ್ತಿದ್ದ ಇಬ್ಬರಿಗೂ ಗಾಯವಾಗಿದೆ. ಘಟನೆ ಹಿನ್ನಲೆ ಗ್ಯಾರೇಜ್ ಪಕ್ಕದ ಮನೆ ಹಾಗೂ ನಿರ್ಮಾಣ ಹಂತದ ಕಟ್ಟಡಕ್ಕೂ ಹಾನಿಯಾಗಿದ್ದು, ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget . Ad Widget .

ಡಿಸಿಪಿ ಗಿರೀಶ್ ಮಾತನಾಡಿ, ‘ಸಂಜೆ ಆರು ಗಂಟೆ ಸುಮಾರಿಗೆ ಗ್ಯಾರೇಜ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೇಲ್ನೋಟಕ್ಕೆ ವೆಲ್ಡಿಂಗ್ ಗ್ಯಾಸ್ ಟ್ಯಾಂಕ್ ಸ್ಫೋಟದಿಂದ ಘಟನೆ ಸಂಭವಿಸಿರುವ ಸಾದ್ಯತೆ ಇದೆ. ಘಟನೆಯಲ್ಲಿ ಗ್ಯಾರೇಜ್ ಮಾಲೀಕ ಹಾಗೂ ಕೆಲಸಗಾರ ಹಾಗೂ ಇಬ್ಬರು ಪಬ್ಲಿಕ್​ಗೆ ಸಣ್ಣಪುಟ್ಟ ಗಾಯವಾಗಿದೆ. ಗಾಯಗೊಂಡಿರುವ ವ್ಯಕ್ತಿಗಳನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡಿರುವ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ ಭೇಟಿ ನೀಡಿ ‘ವೆಲ್ಡಿಂಗ್ ಮಷೀನ್​ನಿಂದ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ವೆಲ್ಡಿಂಗ್ ಮೆಷಿನ್​​ನಿಂದ ಗ್ಯಾಸ್ ಲೀಕ್ ಆಗಿ ಬೆಂಕಿ ವ್ಯಾಪಿಸಿದೆ ಎನ್ನುವ ಮಾಹಿತಿ ಸಿಕ್ಕಿದೆ. ಅಂಥಹ ದೊಡ್ಡ ಪ್ರಮಾಣದ ಗಾಯ ಯಾರಿಗೂ ಆಗಿಲ್ಲ. ಅನಧಿಕೃತವಾಗಿ ಗ್ಯಾಸ್ ವೆಲ್ಡಿಂಗ್ ಮಾಡ್ತಿದ್ದ ಎಂಬ ಮಾಹಿತಿ ಈಗ ಸಿಕ್ಕಿದೆ. ಸೇಫ್ಟಿ ತೆಗೆದುಕೊಂಡಿದ್ದಾರಾ ಅನ್ನೋದನ್ನ ನೋಡಬೇಕು. ತಪ್ಪಿತಸ್ಥರು ಇದ್ರೆ, ಅವರ ಮೇಲೆ ಕ್ರಮಕೈಗೊಳ್ಳಲಾಗುತ್ತೆ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *