ಸಮಗ್ರ ನ್ಯೂಸ್: ಹೆದ್ದೆರೆಗಳ ಹೊಡೆತಕ್ಕೆ ಕೇರಳದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ತಿರುವನಂತಪುರಂನ ಐತಿಹಾಸಿಕ ವಲಿಯತುರಾ ಸಮುದ್ರ ಸೇತುವೆ ನಲುಗಿ ಇಬ್ಬಾಗವಾಗಿದೆ. 2017ರಲ್ಲಿ ಅಪ್ಪಳಿಸಿದ್ದ ಓಖಿ ಚಂಡಮಾರುತ, 2021ರಲ್ಲಿ ಕಾಣಿಸಿಕೊಂಡಿದ್ದ ಟೌಕ್ಷೆ ಚಂಡಮಾರುತದ ಸಂದರ್ಭವೂ ಈ ಸೇತುವೆ ಹಾನಿಗೊಳಗಾಗಿತ್ತು. ಇದೀಗ ಸೇತುವೆಯ ಒಂದು ಭಾಗ ಸಂಪೂರ್ಣ ಕುಸಿದಿದೆ ಎಂದು ಆಡಳಿತ ಮೂಲಗಳು ತಿಳಿಸಿವೆ.
1825 ರಲ್ಲಿ ಮೊದಲು ಉಕ್ಕಿನಲ್ಲಿ ನಿರ್ಮಾಣವಾಗಿದ್ದ ಈ ಸೇತುವೆ 1987ರಲ್ಲಿ ಎಂ.ವಿ. ಪಂಡಿತ್ ಹೆಸರಿನ ಹಡಗು ಡಿಕ್ಕಿಯಾಗಿ ಹಾನಿಗೊಳಗಾಗಿತ್ತು. ಬಳಿಕ 1957ರಲ್ಲಿ ಪುನರ್ ನಿರ್ಮಾಣಗೊಂಡು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿತ್ತು.