ಸಮಗ್ರ ನ್ಯೂಸ್: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ಒಂದು ದೇಶ ಒಂದು ಚುನಾವಣೆ ಯೋಜನೆ ಜಾರಿಗೆ ಸಂಬಂಧಿಸಿದಂತೆ ತನ್ನ ವರದಿಯನ್ನು ತಯಾರಿಸಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸಲಿದೆ ಎಂಬ ಮಾಹಿತಿ ಲಭ್ಯವಿದೆ.
ಪ್ರಮುಖವಾಗಿ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿಯನ್ನು ತಯಾರಿಸುವುದು, ಸರ್ಕಾರ ಅಲ್ಪಮತಕ್ಕೆ ಕುಸಿದಾಗ ಏಕತಾ ಸರ್ಕಾರವನ್ನು ರಚಿಸುವುದು, ರಾಷ್ಟ್ರಪತಿ ಆಡಳಿತಕ್ಕೆ ಸಂಬಂಧಿಸಿದಂತೆ ಸಂವಿಧಾನದ ಐದು ವಿಧಿಗಳನ್ನು ತಿದ್ದುಪಡಿ ಮಾಡಬೇಕೆಂದು ವರದಿಯಲ್ಲಿ ಉಲ್ಲೇಖಿಸಿದೆ ಎಂಬುದಾಗಿ ತಿಳಿದುಬಂದಿದೆ.
ಕೇಂದ್ರ ಕಾನೂನು ಆಯೋಗ ಕೂಡ ತನ್ನ ವರದಿಯನ್ನು ಬಹುತೇಕ ಸಮಾನ ಅಂಶಗಳೊಂದಿಗೆ ತಯಾರಿಸಿದ್ದು, ಈ ಸಂಬಂಧ ಸಂವಿಧಾನದಲ್ಲಿ ಹೊಸ ಪರಿಚ್ಛೇದವನ್ನು ಅಳವಡಿಕೆ ಮಾಡುವ ಕುರಿತು ಮಾಡಿರುವ ಶಿಫಾರಸುಗಳನ್ನು ಸರ್ಕಾರಕ್ಕೆ ಶೀಘ್ರದಲ್ಲೇ ಸಲ್ಲಿಸಲು ಅಂತಿಮ ತಯಾರಿ ನಡೆಸುತ್ತಿದೆ ಎಂಬುದಾಗಿ ತಿಳಿದುಬಂದಿದೆ.
ಬದಲಾಗಬೇಕಿರುವ ವಿಧಿಗಳು 83 – ರಾಷ್ಟ್ರೀಯ ಸದನಗಳ ಅವದಿ ü85 – ರಾಷ್ಟ್ರಪತಿಗಳಿಂದ ಲೋಕಸಭೆಯ ವಿಸರ್ಜನೆ 172 – ರಾಜ್ಯ ಸದನಗಳ ಅವಧಿ 174 – ರಾಜ್ಯ ಸದನಗಳ ವಿಸರ್ಜನೆ 356 – ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ರಾಷ್ಟ್ರಪತಿ ನೇತೃತ್ವದಲ್ಲಿ ಒಂದು ದೇಶ ಒಂದು ಚುನಾವಣೆಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ಮಾಡಲು ಕೇಂದ್ರ ಸರ್ಕಾರ ಕಳೆದ ಸೆಪ್ಟೆಂಬರ್‍ನಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿತ್ತು.