ಸಮಗ್ರ ನ್ಯೂಸ್: 180 ದಿನಗಳ ಬಳಿಕ ಸಂಭ್ರಮದೊಂದಿಗೆ ತಿಮ್ಮಯ್ಯ ಪ್ರತಿಮೆ ಅನಾವರಣಗೊಂಡಿತು. ಜಿಲ್ಲಾ ಪೊಲೀಸ್, ಎನ್ ಸಿಸಿ ಕೆಡೆಟ್ ಗಳೂ ಸೇರಿದಂತೆ ಗಣ್ಯರಿಂದ ವೀರಸೇನಾನಿಗೆ ಗೌರವ ನಮನ.
ನಿವೖತ್ತ ಏರ್ ಮಾರ್ಸೆಲ್ ಕೆ.ಸಿ. ನಂದ ಕಾರ್ಯಪ್ಪ ಅವರಿಂದ ಪ್ರತಿಮೆ ಅನಾವರಣ, ಎಂ.ಸಿ.ನಾಣಯ್ಯ, ಶಾಸಕ ಎ.ಎಸ್.ಪೊನ್ನಣ್ಣ, ಡಾ.ಮಂಥರ್ ಗೌಡ, ಮಾಜಿ ಶಾಸಕ ಕೆ.ಜಿ.ಬೋಪಯ್ಯ, ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಎಂ.ಎಲ್.ಸಿ. ವೀಣಾ ಅಚ್ಚಯ್ಯ, ನಗರಸಭಾ ಅಧ್ಯಕ್ಷೆ ಅನಿತಾಪೂವಯ್ಯ, ಉಪಾಧ್ಯಕ್ಷೆ ಸವಿತಾರಾಕೇಶ್, ಜಿಲ್ಲಾಧಿಕಾರಿ ವೆಂಕಟರಾಜಾ, ಪೊಲೀಸ್ ವರಿಷ್ಯಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ಕಾಳಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ತಿಮ್ಮಯ್ಯ ಫೋರಂ ಅಧ್ಯಕ್ಷ ಕಂಡ್ರತಂಡ ಸುಬ್ಬಯ್ಯ, ಕಾಂಗ್ರೆಸ್ ಮುಖಂಡ ಎಂ.ಲಕ್ಷಣ್, ಕೊಡವ ಸಮಾಜ ಅಧ್ಯಕ್ಷ ಎಂ.ಪಿ.ಮುತ್ತಪ್ಪ, ಕೊಡವ ಸಮಾಜದ ಪದಾಧಿಕಾರಿಗಳು, ನಗರಸಭಾ ಸದಸ್ಯರು, ವಿವಿಧ ಸಂಘಟನೆಗಳ ಪ್ರಮುಖರ ಹಾಜರಿಯಲ್ಲಿ ಅನಾವರಣಗೊಂಡ 800 ಕೆಜಿ ತೂಕದ ತಿಮ್ಮಯ್ಯ ಅವರ ಆಕರ್ಷಕ ಪ್ರತಿಮೆ ಮೈಸೂರಿನಿಂದ ಬೆಳಗ್ಗೆ ಹೊರಟು ಕುಶಾಲನಗರ, ಸುಂಟಿಕೊಪ್ಪಗಳಲ್ಲಿ ಜನರಿಂದ ಪುಷ್ಪಾರ್ಚನೆ ಸ್ವಾಗತದೊಂದಿಗೆ ಮಡಿಕೇರಿಗೆ ಬಂದ ಪ್ರತಿಮೆ
ಜನತೆಯ ಚಪ್ಪಾಳೆಯ ಹರ್ಷೋಧ್ಗಾರದ ನಡುವೇ ಅನಾವರಣಗೊಂಡಿತು.