ಸಮಗ್ರ ನ್ಯೂಸ್: ರಾಷ್ಟ್ರೀಯ ತನಿಖಾ ಸಂಸ್ಥೆ, ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯನ್ನ ಚುರುಕು ಮಾಡಿದೆ. ಬಾಂಬರ್‍ನ ಪೋಟೋವನ್ನು ಹಂಚಿಕೊಂಡಿರುವ ಎನ್‍ಐಎ, ಬಾಂಬರ್‍ನ ಬಂಧನಕ್ಕೆ ಕಾರಣವಾಗಬಲ್ಲ ಮಾಹಿತಿ ನೀಡಿದ ವ್ಯಕ್ತಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ತಿಳಿಸಿದೆ. ಜೊತೆಗೆ ಮಾಹಿತಿ ನೀಡಿದವರ ವ್ಯಕ್ತಿಯನ್ನು ಗೌಪ್ಯವಾಗಿ ಇಡುವುದಾಗಿ ತಿಳಿಸಿದೆ.
ರಾಮೇಶ್ವರಂ ಕೆಫೆಯಲ್ಲಿ ಐಇಡಿ ಬಳಸಿ ಬಾಂಬ್ ಸ್ಫೋಟ ನಡೆಸಿದ ಶಂಕಿತನ ವಿಡಿಯೋಗಳು ಈಗಾಗಲೇ ವೈರಲ್ ಆಗಿದೆ. ಈ ವ್ಯಕ್ತಿಯ ಮಾಹಿತಿ ನೀಡಿ, ಆತನ ಬಂಧನಕ್ಕೆ ಕಾರಣವಾದಲ್ಲಿ ಅವರಿಗೆ 10 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಶಂಕಿತ ಉಗ್ರನ ಮಾಹಿತಿಯನ್ನು 08029510900, 8904241100 ತಿಳಿಸುವಂತೆ ಎನ್‍ಐಎ ತಿಳಿಸಿದ್ದು, ಮಾಹಿತಿ ನೀಡಿದ ವ್ಯಕ್ತಿಯ ಗುರುತನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.