Ad Widget .

ಶಾಸಕರು ಸಚಿವರಾದ್ರೂ ಹೊಳೆ ಈಜೋದು ತಪ್ಪಲಿಲ್ಲ | ಅಂಗಾರರ ಊರಲ್ಲಿ ಜೀವ ಅಂಗೈಯಲ್ಲಿ….! | ಮರಸಂಕದಲ್ಲಿ ಸೇತುವೆ ನಿರ್ಮಾಣ ಯಾವಾಗ…?

ಸುಳ್ಯ: ಈ ಊರಿನ ಹೆಸರು ಮರಸಂಕ. ತಾಲೂಕಿನ ಜಾಲ್ಸೂರು ಗ್ರಾಮಕ್ಕೆ ಒಳಪಡುವ ಈ ಊರಿಗೆ ಅಗತ್ಯ ಮೂಲ ಸೌಕರ್ಯವಾದ ರಸ್ತೆ ಸಂಪರ್ಕವೇ ಇಲ್ಲ. ಇದಕ್ಕೆ ಕಾರಣ ಊರಿಗೆ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿರುವ ಹಳ್ಳ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಊರಿನಿಂದ ಜಾಲ್ಸೂರು ಸಂಪರ್ಕಿಸುವ ದಾರಿಯಲ್ಲಿ ಹಳ್ಳವೊಂದಿದೆ. ಬೇಸಿಗೆಯಲ್ಲಿ ಕಷ್ಟವಿಲ್ಲದೆ ಇದನ್ನು ದಾಟಿ ಊರ ಜನ ಸಾಗುತ್ತಾರೆ. ಆದರೆ ಮಳೆಗಾಲದಲ್ಲೂ ಉಕ್ಕಿ ಬರುವ ನೀರಿನಲ್ಲೇ ಜೀವಭಯದಲ್ಲಿ ನದಿ ದಾಟುವ ಅನಿವಾರ್ಯತೆ ಇಲ್ಲಿನ ನಿವಾಸಿಗಳದ್ದು. ಇತ್ತೀಚೆಗೆ ಸ್ಥಳೀಯ ನಿವಾಸಿ ಮಹಿಳೆಯೊಬ್ಬರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಊರಿನ ಜನತೆಗೆ ರೋಗಿಯನ್ನು ಎತ್ತಿಕೊಂಡು ತುಂಬಿ ಹರಿಯುತ್ತಿರುವ ಹಳ್ಳವನ್ನು ದಾಟಿ ಆಸ್ಪತ್ರೆಗೆ ಸಾಗಿದ್ದಾರೆ. ಈ ಘಟನೆಯ, ಫೋಟೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸಚಿವರ ಕ್ಷೇತ್ರದ ನಿವಾಸಿಗಳ ಅಗತ್ಯ ಮೂಲ ಸೌಕರ್ಯದ ಕೊರತೆಯನ್ನು ಎತ್ತಿ ತೋರಿಸಿದೆ.

Ad Widget . Ad Widget . Ad Widget .

ಇದು ಇಂದು ನಿನ್ನೆಯ ಸಮಸ್ಯೆಯಲ್ಲ ಹಲವಾರು ವರ್ಷಗಳಿಂದ ಊರಿನ 9 ಮನೆಯ ಜನ ಬಾರೀ ಕಷ್ಟ ಅನುಭವಿಸುತ್ತಿದ್ದಾರೆ. ಹಲವು ಬಾರಿ ಜನಪ್ರತಿನಿಧಿಗಳಲ್ಲಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಆದರೆ ಇದ್ಯಾವುದು ಫಲ ನೀಡಿಲ್ಲ. ಇತ್ತೀಚಿನ ಕೆಲವು ವರ್ಷಗಳ ಹಿಂದೆ ಗ್ರಾಮ ಪಂಚಾಯತ್ ಸೇತುವೆ ನಿರ್ಮಿಸುವ ಕಾರ್ಯಕ್ಕೆ ಕೈ ಹಾಕಿತ್ತು. ಅದನ್ನು ಕಂಡ ಮರಸಂಕದ ಜನರ ಮೊಗದಲ್ಲಿ ಮಂದಹಾಸ ಮೂಡಿತ್ತು.

ಆದರೆ ಅದು ಕೆಲವೇ ದಿನಗಳಲ್ಲಿ ಕಮರಿಹೋಯಿತು. ಅನುದಾನ ದ ಕೊರತೆಯಿಂದ ಗ್ರಾಮ ಪಂಚಾಯತ್ ನ ಕೆಲಸ ಅರ್ಧಕ್ಕೆ ಮೋಟಕುಗೊಂಡಿತು. ಅದಾದ ಬಳಿಕ ಇಲ್ಲಿನ ನಿವಾಸಿಗಳು ಶಾಸಕರು ಸೇರಿದಂತೆ ಹಲವಾರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ ಅಂದು ಶಾಸಕರಿದ್ದವರು ಇಂದು ಸಚಿವರಾದರೆ ವಿನಃ ಈ ಊರಿನ ಮೂಲ ಸೌಕರ್ಯ ಅಭಿವೃದ್ಧಿಯ ಮುಖ ಕಾಣಲಿಲ್ಲ.

Leave a Comment

Your email address will not be published. Required fields are marked *