ಸಮಗ್ರ ನ್ಯೂಸ್: ಭಾರತದಲ್ಲಿ ವಾಲ್ಟ್ ಡಿಸ್ನಿ ಸಂಸ್ಥೆಯು ರಿಲಯನ್ಸ್ ಜೊತೆಗೆ ಮಾಧ್ಯಮ ಕ್ಷೇತ್ರದಲ್ಲಿ ವಿಲೀನವಾಗುವುದಾಗಿ ಪ್ರಕಟಿಸಿದೆ. ಈ ಮೂಲಕ ಹೊಸ ಸಂಸ್ಥೆಯ ಒಟ್ಟಾರೆ ಮೌಲ್ಯ 70 ಸಾವಿರ ಕೋಟಿ ರು.ಗೂ ಅಧಿಕವಾಗಲಿದೆ.
ಹೊಸ ಸಂಸ್ಥೆಯಲ್ಲಿ ಶೇ.63.16ರಷ್ಟು ಷೇರನ್ನು ರಿಲಯನ್ಸ್ ಮತ್ತು ಅದರ ಅಂಗ ಸಂಸ್ಥೆಗಳು ಹೊಂದಿದ್ದರೆ, ಡಿಸ್ನಿ ಸಂಸ್ಥೆಯು ಶೇ.36.84ರಷ್ಟು ಷೇರುಗಳನ್ನು ಹೊಂದಿರಲಿದೆ. ಹೊಸ ಸಂಸ್ಥೆಯ ಅಧ್ಯಕ್ಷರಾಗಿ ನೀತಾ ಅಂಬಾನಿ ಅವರು ಕಾರ್ಯನಿರ್ವಹಿಸಲಿದ್ದು, ಉಪಾಧ್ಯಕ್ಷರಾಗಿ ಉದಯ್ ಶಂಕರ್ ಅವರು ಕಾರ್ಯನಿರ್ವಹಿಸಲಿದ್ದಾರೆ. ರಿಲಯನ್ಸ್ ಒಟಿಟಿ ಕ್ಷೇತ್ರದಲ್ಲಿ 11.5 ಸಾವಿರ ಕೋಟಿ ರು. ಹೂಡಿಕೆ ಮಾಡಲು ಒಪ್ಪಿದೆ.
ಸದ್ಯ ರಿಲಯನ್ಸ್ ಸ್ಪೋಟ್ರ್ಸ್ 18 ಸೇರಿ ಹಲವು ಚಾನೆಲ್ ಹೊಂದಿದ್ದು, ಡಿಸ್ನಿಯಲ್ಲಿ ಸ್ಟಾರ್ ಕ್ರಿಕೆಟ್, ಸ್ಟಾರ್ ಸ್ಪೋಟ್ರ್ಸ್, ಕಲರ್ಸ್ ಸೇರಿ ಅನೇಕ ಚಾನೆಲ್ ಇವೆ. ಇವೆಲ್ಲ ಇನ್ನು ಮುಂದೆ ಒಂದೇ ಸಮೂಹದಲ್ಲಿ ಕೆಲಸ ಮಾಡಲಿವೆ.