ಸಮಗ್ರ ನ್ಯೂಸ್: ಪಡಿತರ ಚೀಟಿ ಸಮಸ್ಯೆಗಳ ಬಗ್ಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಿಧಾನಸಭೆ ಯಲ್ಲಿ ಪ್ರಸ್ತಾವಿಸಿದ್ದು, ಅದಕ್ಕೆ ಆಹಾರ, ನಾಗರಿಕ ಸರಬರಾಜು ಇಲಾಖೆ ಸಚಿವರು ಶಾಸಕರು ಉತ್ತರಿಸಿದ್ದಾರೆ
ಎಪಿಎಲ್ ಪಡಿತರ ಚೀಟಿದಾರ ರಿಗೆ ನಿರಂತರವಾಗಿ ಅಕ್ಕಿ ಪೂರೈಸಲು ಸರಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂದು ಶಾಸಕರು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಆಹಾರ ಸಚಿವರು, ವಿವಿಧ ಕಾರಣಗಳಿಂದಾಗಿ ಸರ್ವರ್ ಮೇಲೆ ಹೆಚ್ಚಿನ ಒತ್ತಡ ಇರುತ್ತದೆ. ಆದರೂ ಪ್ರತಿ ತಿಂಗಳ 1ರಿಂದ 10ನೇ ತಾರೀಕಿನವರೆಗೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಈಗಿನ ಸರ್ವರ್‌ಗಳು ಹೆಚ್ಚಿನ ಒತ್ತಡ ಹೊರಲು ಸಾಧ್ಯವಾಗದ ಕಾರಣದಿಂದ ಉದ್ಭವಿಸಿದ ಈ ಸಮಸ್ಯೆಯನ್ನು ನಿವಾರಿಸಲು ಆಹಾರ ತಂತ್ರಾಂಶದ ಸರ್ವರ್‌ಗಳನ್ನು ಎನ್. ಐ.ಸಿ.ಯಿಂದ ಕೆ.ಎಸ್.ಡಿ.ಸಿ.ಗೆ ವರ್ಗಾಯಿಸಲಾಗುತ್ತಿದೆ. ಈ ಕಾರ್ಯ ಪೂರ್ಣಗೊಂಡ ಬಳಿಕ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿ ಬಗ್ಗೆ ನಿರಂತರವಾಗಿ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ. ಎಪಿಎಲ್ ಪಡಿತರ ಚೀಟಿದಾರರಿಗೆ ಸರಾಗವಾಗಿ ಅಕ್ಕಿ ಪೂರೈಕೆ ಸಂಬಂಧದ ಪ್ರಸ್ತಾವನೆಯು ಪರಿಶೀಲನೆ ಹಂತದಲ್ಲಿದೆ ಎಂದು ಸಚಿವರು ಉತ್ತರಿಸಿದ್ದಾರೆ.