ಸಮಗ್ರ ನ್ಯೂಸ್: ವಾಹನ್ ಪೆÇೀರ್ಟಲ್ ಮೂಲಕ ಹೊಸ ವಾಹನ ನೋಂದಾವಣಿಗೆ ಅರ್ಜಿ ಸಲ್ಲಿಸಿದಲ್ಲಿ ಎರಡು ದಿನಗಳಲ್ಲಿ ನೋಂದಾವಣಿ ಸಂಖ್ಯೆ ನೀಡಲು ಕೇರಳ ಸಾರಿಗೆ ಆಯುಕ್ತರು ಆದೇಶ ನೀಡಿದ್ದಾರೆ.
ಜೊತೆಗೆ ಅರ್ಜಿ ಸಲ್ಲಿಸುವಾಗ ಕೇಂದ್ರ ಮೋಟಾರು ವಾಹನ ನಿಯಮಗಳಲ್ಲಿ ಸೂಚಿಸಲಾದ ದಾಖಲೆಗಳು ಇರುವುದು ಕಡ್ಡಾಯವಾಗಿದ್ದು, ಅದನ್ನು ಹೊರತುಪಡಿಸಿ ಯಾವುದೇ ದಾಖಲೆ ಕೇಳುವಂತಿಲ್ಲ. ಸಂಸ್ಥೆಯ ಮುಖ್ಯಸ್ಥರ ಹೆಸರಿನಲ್ಲಿ ಅರ್ಜಿ ಸಲ್ಲಿಸಿದಲ್ಲಿ ವ್ಯಕ್ತಿಗಳ ವೈಯಕ್ತಿಕ ಆಧಾರ್ ಮತ್ತು ಪ್ಯಾನ್ ಕಾರ್ಡ್ ವಿವರಗಳಿಗೆ ಒತ್ತಾಯಿಸುವಂತಿಲ್ಲ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.
ಅರ್ಜಿಯಲ್ಲಿ ನಾಮಿನಿ ಹೆಸರು ಕಡ್ಡಾಯವಲ್ಲ. ನಾಮಿನಿಯ ನಾಮನಿರ್ದೇಶನ ಇದ್ದಲ್ಲಿ ಗುರುತಿನ ಚೀಟಿ ಅಗತ್ಯ. ಇತರ ರಾಜ್ಯದಲ್ಲಿ ಶಾಶ್ವತ ವಿಳಾಸ ಹೊಂದಿರುವ, ರಾಜ್ಯದಲ್ಲಿ ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಶಾಶ್ವತ ವಿಳಾಸದ ಆಧಾರ್ ಪುರಾವೆ ಪ್ರತಿ ಒದಗಿಸುವುದು ಅಗತ್ಯ. ಜೊತೆಗೆ ತಾತ್ಕಾಲಿಕ ವಿಳಾಸ ದಾಖಲೆ ಸಲ್ಲಿಸಿದ ಬಳಿಕ ನೋಂದಣಿಗೆ ಅವಕಾಶ ಎಂದು ಆದೇಶ ಹೇಳಿದೆ.
ಈ ಆದೇಶ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕೂಡಾ ಸೂಚನೆ ನೀಡಲಾಗಿದೆ. ಈ ಆದೇಶ ಮಾ.1 ರಿಂದ ಜಾರಿಗೆ ಬರಲಿವೆ.