ಸಮಗ್ರ ನ್ಯೂಸ್: ಬೆಳಗಾವಿ ನಗರದ ಮಗ್ಗಲ ಗ್ರಾಮದಲ್ಲಿ ನಿರಂತರವಾಗಿ ಕಳ್ಳಭಟ್ಟಿ ಕಾಯಿಸುವ ದಂಧೆ ನಡೆದಿತ್ತು. ಈ ಹಿಂದೆ ಅಬಕಾರಿ ಸಚಿವರೇ ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ ಮಾಡಿದ್ದರು. ಆದರೆ ಈಗ ಮತ್ತೆ ದಂಧೆ ಶುರು ಮಾಡಿ ಬೆಳಗಾವಿ ನಗರ ಪೊಲೀಸರ ಕಾರ್ಯಾಚರಣೆಗೆ ಸಿಕ್ಕಿಬಿದ್ದಿದ್ದಾರೆ.
ಬೆಳಗಾವಿ ತಾಲೂಕಿನ ಸೋನಟ್ಟಿ ಗ್ರಾಮದಲ್ಲಿ ಕಳೆದ ವಾರ ಕಳ್ಳಭಟ್ಟಿ ದಂಧೆ ಅವ್ಯಾವಹಾರ ನಗರ ಪೊಲೀಸ್ ಆಯುಕ್ತರಿಗೆ ಮಾಹಿತಿ ಬಂದಿತ್ತು. ಇದನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಎಲ್ಲೆಲ್ಲಿ ದಂಧೆ ನಡುತ್ತಿದೆ ಎಂದು ಪರಿಶೀಲನೆ ಮಾಡಿ ಪಕ್ಕಾ ಪ್ಲ್ಯಾನ್ ಮಾಡಿಕೊಂಡರು. ಸೋನಟ್ಟಿ ಗ್ರಾಮದಲ್ಲಿ ಅಲ್ಲಲ್ಲಿ ಮನೆಗಳಲ್ಲಿ ಹಾಗೂ ಗ್ರಾಮದ ತಗ್ಗು ಪ್ರದೇಶದ ಹಳ್ಳದಲ್ಲಿ ಖದೀಮರು ಕಳ್ಳಭಟ್ಟಿ ಕಾಯಿಸುವ ದಂಧೆ ಪ್ರಾರಂಭ ಮಾಡಿದ್ದು ಪೊಲೀಸರಿಗೆ ಗೊತ್ತಾಗಿತ್ತು. ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಪೊಲೀಸರ ನೇತೃತ್ವದಲ್ಲಿ ಪ್ಲ್ಯಾನ್ ಮಾಡಿಕೊಂಡು ಬೆಳಗ್ಗೆ ಐದು ಗಂಟೆಗೆ ಸೋನಟ್ಟಿ ಗ್ರಾಮಕ್ಕೆ ಪೊಲೀಸರ ತಂಡ ಎಂಟ್ರಿಯಾಗಿತ್ತು. ಒಂದು ಗ್ರಾಮವೇ ಕಳ್ಳಭಟ್ಟಿ ತಯಾರಿಸುವ ರೀತಿ ಕಂಡು ಬಂದಿದ್ದು ಓಣಿಯ ತುಂಬೆಲ್ಲಾ ಬ್ಯಾರಲ್, ಕಳ್ಳಭಟ್ಟಿ ಕಂಡು ಪೊಲೀಸರೇ ಶಾಕ್ ಆಗಿದ್ದರು. ಕಳ್ಳ ಬಟ್ಟಿ ಅಡ್ಡೆಗಳ ಮೇಲೆ ದಾಳಿ ನಡೆಸಿದ ಪೊಲೀಸರು ಸುಮಾರು 5700 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ಜಪ್ತಿ ಮಾಡಿಕೊಂಡಿದ್ದಾರೆ.