Ad Widget .

ಬನ್ನೇರುಘಟ್ಟದಲ್ಲಿ ದೇಶದ ಅತಿದೊಡ್ಡ ಚಿರತೆ ಸಫಾರಿ ಶೀಘ್ರವೇ ಆರಂಭ

ಸಮಗ್ರ ನ್ಯೂಸ್: ದೇಶದ ಅತಿದೊಡ್ಡ ಹಾಗೂ ರಾಜ್ಯದ ಮೊದಲ ಚಿರತೆ ಸಫಾರಿ ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಶೀಘ್ರವೇ ಆರಂಭವಾಗಲಿದೆ. ಈಗಾಗಲೇ ಇರುವ ಹುಲಿ ಮತ್ತು ಸಿಂಹ ಸಫಾರಿ ಮಾದರಿಯಲ್ಲಿಯೇ ಚಿರತೆ ಸಫಾರಿಯನ್ನು ಆರಂಭಿಸಲಾಗುತ್ತದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಚಿರತೆ ಸಫಾರಿ ಶೀಘ್ರವೇ ಕಾರ್ಯರೂಪಕ್ಕೆ ಬರಲಿದ್ದು, ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಇನ್ನೇನು ಒಂದೂವರೆ ತಿಂಗಳಲ್ಲಿಯೇ ಸಫಾರಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ಬೇರೆ ಕಡೆಗಳಿಂದ ಬಂದ ಚಿರತೆಗಳು ವಾತಾವರಣಕ್ಕೆ, ಸಹಬಾಳ್ವೆಗೆ ಹೊಂದಿಕೊಳ್ಳಲು ಸಮಯ ಹಾಗೂ ತರಬೇತಿ ಅವಶ್ಯವಿದೆ.

Ad Widget . Ad Widget . Ad Widget .

ಬನ್ನೇರುಘಟ್ಟದಲ್ಲಿ ಒಟ್ಟಾರೆ ಚಿರತೆ ಸಫಾರಿಗಾಗಿ 20 ಹೆಕ್ಟೇರ್ ಪ್ರದೇಶವನ್ನು ಗುರುತಿಸಲಾಗಿದೆ. ಚಿರತೆಗಳು ತಪ್ಪಿಸಿಕೊಳ್ಳದಂತೆ ಎತ್ತರದ ಮೆಶ್ ಹಾಗೂ ಬೇಲಿಗಳನ್ನು ಹಾಕಲಾಗುತ್ತದೆ. ಇಲ್ಲಿ 20 ಚಿರತೆಗಳು ಇರಬಹುದು, ಸದ್ಯಕ್ಕೆ 12 ಚಿರತೆಗಳು ಇವೆ.

Leave a Comment

Your email address will not be published. Required fields are marked *