Ad Widget .

ಅರಂತೋಡು: ಸಂವಿಧಾನ ಜಾಥಾಕ್ಕೆ ಅದ್ಧೂರಿ ಸ್ವಾಗತ

ಸಮಗ್ರ ನ್ಯೂಸ್: ಸಂವಿಧಾನದ 75 ನೇ ವರ್ಷಾಚರಣೆ ಪ್ರಯುಕ್ತ ಜಿಲ್ಲೆಯಾಧ್ಯಂತ ಸಂಚರಿಸುತ್ತಿರುವ ಸಂವಿಧಾನ ಜಾಗ್ರತಿ ಜಾಥಾವು ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಆಗಮಿಸಿದಾಗ ಗ್ರಾಮದ ಆರ್ಲಡ್ಕದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಸ್ವಾಗತಿಸಿ ವಾಹನ ಜಾಥಾದೊಂದಿಗೆ ಬರಮಾಡಿಕೊಳ್ಳಲಾಯಿತು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ತೆಕ್ಕಿಲ್ ಸಮುದಾಯ ಭವನದಿಂದ ಪಂಚಾಯತ್ ವಠಾರದವರೆಗೆ ನಾಸಿಕ್ ಬ್ಯಾಂಡ್, ಸ್ಕೌಟ್, ಶಾಲಾ ವಿಧಾರ್ಥಿಗಳು, ಸಂಘ ಸಂಸ್ಥೆಗಳ ಪಧಾಧಿಕಾರಿಗಳು, ವಾಹನ ಮಾಲಕರು ಹಾಗೂ ಸಾರ್ವಜನಿಕರೊಂದಿಗೆ ಅರಂತೋಡು ಪೇಟೆಯ ಮೂಲಕ ಮೆರವಣಿಗೆಯೊಂದಿಗೆ ಆಗಮಿಸಿ ಪಂಚಾಯತ್ ವಠಾರದಲ್ಲಿ ಕಾರ್ಯಕ್ರಮ ನಡೆಸಲಾಯಿತು.

Ad Widget . Ad Widget . Ad Widget .

ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಅರಂತೋಡು ಪ್ರಾಥಮಿಕ ಕ್ರಷಿಪತ್ತಿನ ಸಹಕಾರಿ ಸಂಘದ ಪರವಾಗಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಹಾಗೂ ಸಾರ್ವಜನಿಕರ ಪರವಾಗಿ ಸೋಮಶೇಖರ ಪೈಕ ಅಂಬೆಡ್ಕರ್ ಪ್ರತಿಮೆಗೆ ಹಾರಾರ್ಪಣೆ ಮಾಡಿದರು. ದೀಪ ಪ್ರಜ್ವಲನೆಯನ್ನು ನಿವೃತ್ತ ಶಾಲಾ ಮುಖ್ಯೋಪಾಧ್ಯಾಯ ಹೊನ್ನಪ್ಪ ಅಡ್ತಲೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ನೋಡೆಲ್ ಅಧಿಕಾರಿ ಪ್ರೀತಿ ಇಂಜಿನಿಯರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಭವಾನಿ ಚಿಟ್ಟನ್ನೂರ್, ಮಾಜಿ ಉಪಾಧ್ಯಕ್ಷೆ ಹರಿಣಿ ದೇರಾಜೆ, ಸದಸ್ಯ ವೆಂಕಟರಮಣ ಪೆತ್ತಾಜೆ, ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ, ಅಶ್ರಫ್ ಗುಂಡಿ, ನಿವೃತ್ತ ಅಧ್ಯಾಪಕ ಜತ್ತಪ್ಪ ಮಾಸ್ತರ್, ವಾಹನ ಚಾಲಕ ಮಾಲಕ ಸಂಘದ ಅಧ್ಯಕ್ಷ ಜನಾರ್ಧನ ಇರ್ಣೆ, ಅರಂತೋಡು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯ ಗೋಪಾಲಕೃಷ್ಣ ಬನ, ಅಡ್ತಲೆ ಶಾಲಾ ಅಧ್ಯಾಪಕ ಮುಕುಂದ ದೇರಾಜೆ, ತೊಡಿಕಾನ ಶಾಲಾ ಮುಖ್ಯೋಪಾಧ್ಯಾಯ ಅರುಣ್ ಕುಮಾರ್, ನಿವೃತ್ತ ಪ್ರಾಂಶುಪಾಲ ಕೆ.ಆರ್. ಗಂಗಾಧರ್, ಕೆ.ಆರ್ ಪದ್ಮನಾಭ್ ಕುರುಂಜಿ, ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪಧ್ಮಕುಮಾರ್, ಶಿಕ್ಷಕರಾದ ಮನೋಜ್, ಸಂದೇಶ್, ಜಯರಾಮ, ಶಾಲಾ ಶಿಕ್ಷಕಿ ಸರಸ್ವತಿ, ಭಾನುಮತಿ, ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್, ಸುರೇಶ್ ಉಳುವಾರು, ಅಮೀರ್ ಕುಕ್ಕುಂಬಳ, ಕುಸುಮಾಧರ ಅಡ್ಕಬಳೆ, ಗಂಗಮ್ಮ ಟೀಚರ್, ಧನುರಾಜ್ ಊರುಪಂಜ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು,ಅರೋಗ್ಯ ಸಹಾಯಕಿಯರು ಶಾಲಾ ವಿಧ್ಯಾರ್ಥಿಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯ ಪ್ರಕಾಶ್ ಪ್ರತಿಜ್ಞಾ ವಿಧಿ ಭೋದಿಸಿ ಕಾರ್ಯಕ್ರಮ ನಿರೂಪಿಸಿದರು. ಜಾಗೃ lತಿ ತಂಡದವರಿಂದ ನಾಟಕ ಹಾಗೂ ಟ್ಯಾಬ್ಲೋ ಪ್ರದರ್ಶನಗೊಂಡಿತು. ಗ್ರಾಮ ಪಂಚಾಯತ್ ಸಿಬ್ಬಂಧಿಗಳು ಸಹಕರಿಸಿದ್ದರು.

Leave a Comment

Your email address will not be published. Required fields are marked *