Ad Widget .

ಉಡುಪಿ: ಅಪಹರಣಕ್ಕೊಳಗಾದ ಮಗು ರಕ್ಷಣೆ | ಆರೋಪಿ ಪೊಲೀಸ್ ವಶಕ್ಕೆ

ಉಡುಪಿ: ಕರಾವಳಿ ಬೈಪಾಸ್‌‌ ಬಳಿಯಿಂದ ಭಾನುವಾರ ಬೆಳಗ್ಗೆ ಅಪಹರಣಕ್ಕೊಳಗಾದ ಮಗುವನ್ನು ಉಡುಪಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಆರೋಪಿ ಸಹಿತ ಕುಮುಟಾದಲ್ಲಿ ಪತ್ತೆ ಮಾಡಿದ್ದಾರೆ.

Ad Widget . Ad Widget .

ಆರೋಪಿಯನ್ನು ಬಾಗಲಕೋಟೆಯ ಪರಶು ಎಂದು ಗುರುತಿಸಲಾಗಿದೆ. ಕುಮುಟಾದಲ್ಲಿ ರೈಲ್ವೆ ಪೊಲೀಸರ ಸಹಕಾರದೊಂದಿಗೆ ಪತ್ತೆ ಹಚ್ಚಿ, ಮಗು ಶಿವರಾಜ್‌ (2.5 ವರ್ಷ) ಹಾಗೂ ಆರೋಪಿಯನ್ನು ಇಂದು ಬೆಳಗ್ಗೆ ಪೊಲೀಸರು ಉಡುಪಿಗೆ ಕರೆತಂದಿದ್ದಾರೆ ಎಂದು ತಿಳಿದುಬಂದಿದೆ.

Ad Widget . Ad Widget .

ಭಾನುವಾರ ಬೆಳಗ್ಗೆ ಪರಶು ಮಗುವನ್ನು ಅಪಹರಿಸಿ ಕರಾವಳಿ ಬೈಪಾಸ್‌ನಿಂದ ಸಿಟಿಬಸ್‌‌ನಲ್ಲಿ ಪ್ರಯಾಣಿಸಿ ಸಂತೆಕಟ್ಟೆಯಲ್ಲಿ ಇಳಿದಿದ್ದನು. ಸಂತೆಕಟ್ಟೆಯಲ್ಲಿ ಆತ ಮಗುವಿನೊಂದಿಗೆ ಬಸ್‌ನಲ್ಲಿ ಭಟ್ಕಳಕ್ಕೆ ಪ್ರಯಾಣಿಸಿದ್ದಾನೆ. ನಂತರ ಅಲ್ಲಿಂದ ದಾಂಡೇಲಿಗೆ ಹೋಗುವ ರೈಲಿಗೆ ಹತ್ತಿದ್ದು, ನಂತರ ಕುಮಟಾ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದಾನೆ.

ಈ ಬಗ್ಗೆ ಉಡುಪಿ ಪೊಲೀಸರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಮೇರೆಗೆ ಭಟ್ಕಳ, ಕುಮಟಾ ಸೇರಿದಂತೆ ಕಾರವಾರ ಪೊಲೀಸರು ಹುಡುಕಾಟ ನಡೆಸಿದ್ದು, ರಾತ್ರಿ ವೇಳೆ ಕುಮಟಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *