ಸಮಗ್ರ ನ್ಯೂಸ್: ಸೋಷಿಯಲ್ ಮೀಡಿಯಾದಲ್ಲಿ ಕರಿಮಣಿ ಮಾಲೀಕ ನೀನಲ್ಲಾ ಸಾಂಗ್ ಇವತ್ತಿಗೆ ಸಾಕಷ್ಟು ಟ್ರೆಂಡ್ ಆಗಿದ್ದು ಪ್ರತಿಯೋಬ್ಬರ ಬಾಯಲ್ಲೇ ಕೇಳಲಿ ‘ಏನಿಲ್ಲಾ… ಏನಿಲ್ಲಾ….’ ಇಂದೊಂದೇ ಹಾಡು. ಹಾಗಿದ್ರೇ ಇದು ಯಾಕೆ ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿದೆ.?
ಸ್ಯಾಂಡಲ್‌ವುಡ್‌ನ ನಟ ಉಪ್ಪಿ ಉಪೇಂದ್ರ ಹಾಗೂ ನಟಿ ಪ್ರೇಮಾ ಅಭಿನಯದ ಸೂಪರ್ ಹಿಟ್ ಸಾಂಗ್ ಇದು. 1999ರಲ್ಲಿ ತೆರೆ ಕಂಡ ‘ಉಪೇಂದ್ರ’ ಸಿನಿಮಾದ ಈ ಹಾಡು 25 ವರ್ಷಗಳ ನಂತರ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಲು ಶುರುವಾಗಿದೆ. ಇದಕ್ಕೆ ಹಾಡಿನ ಸೃಷ್ಟಿಕರ್ತ ಗುರುಕಿರಣ್ ಕೂಡ ಈ ಹಾಡನ್ನು ಮತ್ತೆ ಹಾಡುವ ಮೂಲಕ ಮನಸೋತಿರುವುದು ವಿಶೇಷ.
ಕರಿಮಣಿ ಮಾಲೀಕ ನೀ….ನಲ್ಲ ಎಂದ ಗುರುಕಿರಣ್
ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಉಪೇಂದ್ರ ಕಾಂಬಿನೇಷನ್‌ನಲ್ಲಿ ‘ಉಪೇಂದ್ರ’ ಸಿನಿಮಾದಲ್ಲಿ ಉಪ್ಪಿ ಹಾಗೂ ಪ್ರೇಮಾ ಮಧ್ಯೆ ಬರುವ ಈ ಹಾಡು ಸಖತ್ ಹಿಟ್ ಆಗಿತ್ತು. ಎಲ್ಲರ ಮೆಚ್ಚುಗೆ ಗಳಿಸಿತ್ತು. ಪ್ರತಿಮಾ ರಾವ್ ಎಂಬುವವರು ಈ ಹಾಡನ್ನು ಹಾಡಿದ್ದು ಗುರು ಕಿರಣ್ ಸಂಗೀತ ನಿರ್ದೇಶನ ನೀಡಿದ್ದರು. 25 ವರ್ಷಗಳ ಬಳಿಕ ಈ ಹಾಡು ಟ್ರೆಂಡ್ ಆಗಿದ್ದು ಗುರುಕಿರಣ್ ಸ್ವತ: ತಾವು ಕೂಡ ಈ ಹಾಡನ್ನು ಹಾರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಹಾಡು ಮತ್ತೆ ಟ್ರೆಂಡ್ ಆಗಿರುವುದಕ್ಕೆ ಅವರು ಸಂತೋಷ ಕೂಡ ಪಟ್ಟಿದ್ದಾರೆ. ಅಭಿಮಾನಿಗಳು ಗುರುಕಿರಣ್ ಅವರಿಗೆ ಅಭಿನಂದನೆಗಳನ್ನೂ ತಿಳಿಸಿದ್ದಾರೆ.
ಮತ್ಯಾಕೆ ಟ್ರೆಂಡ್ ಆಯ್ತು?
ಉತ್ತರ ಕರ್ನಾಟಕದ ಕನಕ ಎಂಬ ಯುವಕನಿಂದ 25 ವರ್ಷ ಹಳೆಯ ಈ ಹಾಡು ಹವಾ ಸೃಷ್ಟಿಸಿದೆ. ಈ ಯುವಕ ತನ್ನದೇ ಆದ ಶೈಲಿನಲ್ಲಿ ”ಓ ನಲ್ಲ, ನೀ ನಲ್ಲ, ಕರಿಮಣಿ ಮಾಲೀಕ ನೀನಲ್ಲ.. ಕರಿಮಣಿ ಮಾಲೀಕ ನೀ ನಲ್ಲ..’ ಎಂಬ ಸಾಲುಗಳನ್ನು ಬಳಸಿ, ರೀಲ್ ಮಾಡಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಯ್ತು. ಬಳಿಕ ಇದು ಟಪ್ಪಾಂಗುಚ್ಚಿ ವರ್ಷನ್‌ಗೆ ಬದಲಾಯ್ತು. ಈಗ ಇದು ಭಾರೀ ಸದ್ದು ಮಾಡುತ್ತಿದೆ.