ಸಮಗ್ರ ನ್ಯೂಸ್: ಎಲ್ಲೆಡೆ ಹಸಿರು ಬೆಳಸಿ ನಾಡು ಉಳಿಸಿ ಎಂದು ಹಸಿರು ಬೆಳೆಯುವುದನ್ನು ಪ್ರೋತ್ಸಾಹಿಸುತ್ತಿದ್ದರೆ, ಹಾತೂರು ಪಂಚಾಯತಿ ಕಾನೂನು ಕ್ರಮ ಜರುಗಿಸುವ ಬೆದರಿಕೆ ನೀಡುತ್ತಿದೆ.
ನಮ್ಮ ಮನೆಯ ಸುತ್ತಮುತ್ತ ಹಸಿರು ಮತ್ತು ನೆರಳು ಇರಲಿ ಎಂದು ಮನೆಯ ಎದುರು ರಸ್ತೆ ಬದಿಯಲ್ಲಿ ಗಸಗಸೆ ಗಿಡವನ್ನು ನೆಟ್ಟು ಪೋಷಿಸುತ್ತಿರುವಾಗ ಪಂಚಾಯತಿಯಿಂದ ಗಿಡವನ್ನು ಕಡಿಯಲು ನೋಟೀಸ್ ಕಳುಹಿಸಲಾಗಿದೆ. ಈಗಿರುವ ಗಿಡ ದೊಡ್ಡದಾಗಿ ಬೆಳೆದು ದಾರಿಹೋಕರಿಗೆ ಹಾಗು ವಾಹನ ಸವಾರರಿಗೆ ಅಡಚಣೆ ಉಂಟಾಗುತ್ತಿದೆ ಎಂದು ಇಲ್ಲದ ಕಾರಣ ನೀಡಿ ಕಾನೂನು ಕ್ರಮ ಕೈಗೂಳ್ಳುವ ನೋಟೀಸನ್ನು ಹಾತೂರು ಪಂಚಾಯತಿ ನೀಡಿದೆ.
ಲಗತ್ತಿಸಿರುವ ಫೋಟೋ ಗಮನಿಸಿ ಹಾಗು ರಸ್ತೆ ಎಷ್ಟು ಅಗಲವಿದೆ ಹಾಗು ನೆಟ್ಟಿರುವ ಜಾಗ (ರಸ್ತೆಯ ಬಲಭಾಗ) ನೋಡಿ. ರಸ್ತೆ ಬದಿಯಲ್ಲಿ ಜನರಿಗೆ ಹಾಗು ವಾಹನ ಸವಾರರಿಗೆ ತೊಂದರೆ ಆಗದಂತೆ ಗಿಡ ನೆಟ್ಟಿರುವಾಗ, ಸ್ಥಳಕ್ಕೆ ಬಂದು ಪರೀಶೀಲನೆ ಮಾಡದೆ, ನಮಗೆ ನೇರವಾಗಿ ತಿಳಿಸದೇ, ತೊಂದರೆ ಆಗದಿರುವ ಗಿಡವನ್ನು ಕಡಿಯಬೇಕು ಇಲ್ಲವಾದರೆ ಕಾನೂನು ಕ್ರಮ ಜರುಗಿಸುವ ನೋಟೀಸ್ ಕಳುಹಿಸಿದರೆ ಇದನ್ನು ಬೆದರಿಕೆ ಎನ್ನಲಾರದೆ? ಹಾಗಾದರೆ ನಾವು ಹಸಿರು ಬೆಳೆಸಬಾರದೇ? ಮರ ಗಿಡ ಉಳಿಸಬಾರದೇ? ಪಕ್ಷಿಗಳಿಗೆ ಆಸರೆ ನೀಡಬಾರದೇ? ಎಂದು ನೆಟ್ಟಿಗರು ಹೇಳಿದ್ದಾರೆ.