ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ತಂಡವೊಂದು ಆಶಕ್ತರ ಹೆಸರಿನಲ್ಲಿ ಹಣ ಸಂಗ್ರಹ ಮಾಡುತ್ತಿದ್ದು, ವಿಚಾರಣೆ ನಡೆಸಿ ನಾಗರೀಕರು ಪೊಲೀಸರಿಗೆ ಒಪ್ಪಿಸಿದ ಘಟನೆ ಫೆ.3 ರಂದು ಪೆರ್ಲದಲ್ಲಿ ನಡೆದಿದೆ.
ಈ ತಂಡ ಪೇಟೆಯಲ್ಲಿ, ಜಾತ್ರೆ ಜನ ಜಂಗುಲಿ ಇರುವಲ್ಲಿ ದೇಣಿಗೆ ಸಂಗ್ರಹಿಸಿ ನಕಲಿ ಕೂಪನ್ ನೀಡುತ್ತಿತ್ತು. ಮೂರು ಜನರ ತಂಡವಾಗಿದೆ. ಆರಂಭದಲ್ಲಿ ಹರೀಶ ಎಂಬ ಹಿಂದೂ ಹೆಸರನ್ನು ಸೂಚಿಸಿದ, ಈತನ ಪೂರ್ವಪರ ದಾಖಲೆ ಪರಿಶೀಲಿಸಿದಾಗ ಹಾರೀಸ್ ಎಂದು ಪತ್ತೆಯಾಗಿತ್ತು. ಬಳಿಕ ಇನ್ನೋರ್ವನನ್ನು ವಿಚಾರಿಸಿದಾಗ ಈತನು ಅನ್ಯ ಮತೀಯಯನೆಂದು ತಿಳಿದು ಬಂದಿದೆ. ಇನ್ನೊರ್ವ ದಿನಕೂಲಿ ಆಧಾರದಲ್ಲಿ ಕೆಲಸ ಮಾಡಲು ಇವರೊಟ್ಟಿಗೆ ಸೇರಿಕೊಂಡಿದ್ದ ಎನ್ನಲಾಗಿದೆ.
ಅಲ್ಲದೆ ಇವರು ಸಂಚರಿಸುತ್ತಿದ್ದ ವಾಹನವನ್ನು ಪರಿಶೀಲಿಸುವಾಗ ದಾಖಲೆಯಲ್ಲಿ ಇನ್ಯಾರದೊ ಹೆಸರಿನಲ್ಲಿದ್ದು ವಾಹನಕ್ಕೆ ಭಗವತಿ – ಸಂಚಾರಿ ಗುಳಿಗ ಎಂಬ ಸ್ಟಿಕ್ಕರ್ ಅಂಟಿಸಿ ಹಿಂದೂ ಸಂಘಟನೆ ಎಂದು ಬಿಂಬಿಸುವಂತೆ ನಾಗರಿಕರಿಂದ ಹಣ ಸಂಗ್ರಹಿಸುತ್ತಿದ್ದರು ಎಂದು ತಿಳಿದಿದೆ. ಈ ಬಗ್ಗೆ ಬದಿಯಡ್ಕ ಠಾಣಾ ಪೋಲಿಸರು ಸ್ಥಳಕ್ಕಾಗಮಿಸಿ ತಂಡವನ್ನು ಬಂಧಿಸಿದ್ದಾರೆ.