ಬೆಂಗಳೂರು : ಋಣಭಾರ ಪ್ರಮಾಣ ಪತ್ರ ವನ್ನು ಆನ್ ಲೈನ್ ನಲ್ಲೇ ಪಡೆಯಲು ಅವಕಾಶ ಕಲ್ಪಿಸುವ ಮೂಲಕ ಆಸ್ತಿ ತೆರಿಗೆದಾರರಿಗೆ ಸರಕಾರ ಸಿಹಿಸುದ್ದಿ ನೀಡಿದೆ.
ಆಸ್ತಿಗಳ ಋಣಭಾರ ಪ್ರಮಾಣ ಪತ್ರ (ಇ.ಸಿ) ಪಡೆಯಲು ಸಬ್ ರಿಜಿಸ್ಟಾರ್ ಕಚೇರಿಗೆ ಹೋಗಿ ಕ್ಯೂ ನಿಲ್ಲಬೇಕಿತ್ತು. ಆದರೆ ಮುಂದಿನ ದಿನಗಳಲ್ಲಿ ಇದಕೆಲ್ಲಾ ಅವಕಾಶ ನೀಡದೆ ತಮ್ಮ ತಮ್ಮ ಮನೆ, ಕಚೇರಿಗಳಲ್ಲೇ ಕುಳಿತು ಆನ್ ಲೈನ್ ಮೂಲಕ ಇ.ಸಿ. ಪಡೆಯಬಹುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಸರ್ಕಾರಕ್ಕೆ ಪಾವತಿಸಬೇಕಾದ ಶುಲ್ಕವನ್ನು ಆನ್ ಲೈನ್ ಮೂಲಕವೇ ಕಟ್ಟಿ ತಮಗೆ ಬೇಕಾದ ಇ.ಸಿ.ಯನ್ನು ಆನ್ ಲೈನ್ ಮೂಲಕ ಡೌನ್ ಲೋಡ್ ಮಾಡಿಕೊಂಡು ಪ್ರಿಂಟ್ ಪಡೆಯಬಹುದು.
ಹಾಗೆಯೇ ಎಲ್ಲ ಸಬ್ ರಿಜಿಸ್ಟಾರ್ ಕಚೇರಿ ಮುಂದೆ ಕಿಯೋಸ್ಕ್ ಅಳವಡಿಸಿ ಅಲ್ಲಿ ಕೂಡ ಇ.ಸಿ. ಡೌನ್ ಲೋಡ್ ಮಾಡಿಕೊಂಡು ಪ್ರಿಂಟ್ ಪಡೆಯಬಹುದು ಎಂದು ಆರ್.ಅಶೋಕ್ ಮಾಹಿತಿ ನೀಡಿದ್ದಾರೆ.