ಬೆಳಗಾವಿ: ‘ಸರಿಯಾದ ಬೆಲೆ ಮತ್ತು ಮಾರುಕಟ್ಟೆ ಸಿಗದಿರುವುದು ಹಾಗೂ ರೋಗ ಬಾಧೆಯಿಂದ ಕಂಗೆಟ್ಟು ರೈತನೋರ್ವಎರಡು ಎಕರೆ ದಾಳಿಂಬೆ ಬೆಳೆಯನ್ನು ಕೊಡಲಿಯಿಂದ ಕತ್ತರಿಸಿದ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಅಜೂರ ಗ್ರಾಮದಲ್ಲಿ ನಡೆದಿದೆ.
ರೈತ ನವನಾಥ ಮಾನೆ ಎಂಬವರು ತಮ್ಮ ಎರಡು ಎಕರೆ ಹೊಲದಲ್ಲಿ ದಾಳಿಂಬೆ ಬೆಳೆದಿದ್ದರು. ಹವಾಮಾನ ವೈಪರೀತ್ಯ, ರೋಗ ಬಾಧೆ ಮತ್ತು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಸಿಗದೆ ಕಂಗಾಲಾಗಿ ಶುಕ್ರವಾರ ದಾಳಿಂಬೆ ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ. ಬೆಳೆಗೆ ವರ್ಷಕ್ಕೆ 2-3 ಲಕ್ಷ ಖರ್ಚಾಗುತ್ತದೆ. ಆದರೆ ಕೋವಿಡ್ ಲಾಕ್ ಡೌನ್ ಮತ್ತಿತ್ತರ ಸಮಸ್ಯೆಯಿಂದ ನಷ್ಟವಾಗುತ್ತಿದ್ದು, ಗಿಡಗಳನ್ನು ಕತ್ತರಿಸಿರುವುದಾಗಿ ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇಂತಹ ಕಷ್ಟಗಳನ್ನು ಅನೇಕ ರೈತರು ಅನುಭವಿಸುತ್ತಿದ್ದಾರೆ.