ಸಮಗ್ರ ನ್ಯೂಸ್: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಯದಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಡುವಂತಾಗಿದೆ.
ಮಂಗಳವಾರ ರಾತ್ರಿ ಅಪಘಾತದಲ್ಲಿ ಗಾಯಗೊಂಡು ಓರ್ವ ವ್ಯಕ್ತಿ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಗಾಯಾಳು ಬಂದ ಸಮಯದಲ್ಲಿ ಶಿಪ್ಟ್ ಬದಲಾವಣೆಯಾಗಿದ್ದು, ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇರಲಿಲ್ಲ. ಗಂಟೆ ಗಟ್ಟಲೆ ಕಾದರು ವೈದ್ಯರು ಹಾಗೂ ಸಿಬ್ಬಂದಿ ಚಿಕಿತ್ಸೆ ನೀಡಲು ಬರಲಿಲ್ಲ. ಇದರಿಂದ ಗಾಯಳು ನೋವಿನಿಂದ ನರಳುವಂತಾಯಿತು. ಕಡೆಗೆ ಕೆಲ ಸಮಯದ ನಂತರ ಓರ್ವ ವೈದ್ಯ ಬಂದು ಚಿಕಿತ್ಸೆ ನೀಡಿದರು.
ಆದರೆ ರಾತ್ರಿ ಪಾಳಯದಲ್ಲಿ ಕೇವಲ ಒಬ್ಬ ವೈದ್ಯರು ಮಾತ್ರ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಇವರು ಒಬ್ಬರೇ ಎಲ್ಲ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ಚಿಕಿತ್ಸೆ ನೀಡಲು ತಡವಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಿ ಹೆಚ್ಚುವರಿ ಸಿಬ್ಬಂದಿ ನೇಮಿಸುವಂತೆ ಸ್ಥಳಿಯರ ಒತ್ತಾಯಿಸಿದ್ದಾರೆ