ಸಮಗ್ರ ನ್ಯೂಸ್:ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ರಾಮಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠೆಯು ಜ.22 ಸೋಮವಾರದಂದು ವಿಜೃಂಭಣೆಯಿಂದ ನಡೆಯಿತು.
ಈ ಸುಮಧುರ ಕ್ಷಣವನ್ನು ಭಾರತದ ಹಿಂದೂ ಬಂಧುಗಳು ದೇವಸ್ಥಾನ, ದೈವಸ್ಥಾನ, ಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ಮಾಡುವುದರ ಮೂಲಕ ವಿಶ್ವದಾದ್ಯಂತ ಸಂಭ್ರಮಿಸಿದರು. ಅದರಂತೆಯೇ ಜಯನಗರದ ಕೊರಂಬಡ್ಕದಲ್ಲಿರುವ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಜಯನಗರ ಘಟಕ ಇವುಗಳ ಆಶ್ರಯದಲ್ಲಿ ಶ್ರೀ ರಾಮತಾರಕ ಯಜ್ಞ ಮತ್ತು ಭಜನಾ ಸಂಕೀರ್ತನೆ ಕಾರ್ಯಕ್ರಮ ನಡೆಯಿತು.
ಬೆಳಗ್ಗೆ 7 ಗಂಟೆಗೆ ಶ್ರೀ ಕ್ಷೇತ್ರದ ಕಾರಣಿಕ ಶಕ್ತಿಗಳಿಗೆ ಕ್ಷೇತ್ರದ ಪಾತ್ರಿಗಳಾದ ಭಾಸ್ಕರ ನಾರಾಜೆ, ಬಾಬು.ಕೆ, ಶಿವಕುಮಾರ್, ಜನಾರ್ಧನ ಜಿ ಜಯನಗರ, ಮೋಹನ್ ಹೊಸಗದ್ದೆ ಇವರ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿತು. ಬಳಿಕ 10:30ಕ್ಕೆ ಪುರೋಹಿತ ದಿವಿಜೇಶ್ ಕೆದಿಲಾಯ ಅವರ ನೇತೃತ್ವದಲ್ಲಿ ಶ್ರೀ ರಾಮ ತಾರಕ ಯಜ್ಞ ಕಾರ್ಯ ನೆರವೇರಿತು.
ಈ ಸಂಧರ್ಭದಲ್ಲಿ ನಾದಪಯಸ್ವಿನಿ ಭಜನಾ ಮಂಡಳಿ ಹೊಸಗದ್ದೆ ಇದರ ವತಿಯಿಂದ ಸತತ 5 ಗಂಟೆಗಳ ಕಾಲ ಭಜನಾ ಸಂಕೀರ್ತನೆ ಮತ್ತು ರಾಮ ಮಂತ್ರವನ್ನು ನಡೆಸಿಕೊಟ್ಟರು.
ಆಕರ್ಷಣೆಯಾಗಿ ಭಜನಾ ಮಂಡಳಿಯ ಮಕ್ಕಳಿಂದ ಕುಣಿತ ಭಜನೆ ಮತ್ತು ಜಯನಗರ ಮಿಲಿಟರಿ ಗ್ರೌಂಡಿನ ಯುವ ಕಲಾವಿದ ಧೀರೇಶ್ ಅವರ ಕೈ ಚಳಕದಿಂದ ರಂಗೋಲಿಯಲ್ಲಿ ಮೂಡಿ ಬಂದ ರಾಮ ಲಕ್ಷ್ಮಣ ಸೀತಾ ಮಾತೆಯ ಚಿತ್ರ ಭಕ್ತರ ಗಮನ ಸೆಳೆಯಿತು. ಅಯೋಧ್ಯೆಯಲ್ಲಿ ನಡೆಯುವ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ನೇರಪ್ರಸಾರವನ್ನು LEDಯ ಮೂಲಕ ತೋರಿಸುವ ಕೆಲಸವನ್ನು ಮಾಡಲಾಗಿತ್ತು. ಶ್ರೀ ಕ್ಷೇತ್ರದ ವತಿಯಿಂದ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಅಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ 3ನೇ ವಾರ್ಡಿನ ಎಲ್ಲಾ ಹಿಂದೂ ಬಂಧುಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು.
ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಜಯನಗರ ಘಟಕದ ರಮೇಶ್ ಇರಂತಮಜಲು, ಸಚಿನ್ ಕೊಯಿಂಗೋಡಿ, ಪ್ರಶಾಂತ್ ಕುದ್ಪಾಜೆ, ದಯಾನಂದ ಕುದ್ಪಾಜೆ, ಬಾಲಮುರಲಿ ಕುದ್ಪಾಜೆ, ಗೋಪಾಲಕೃಷ್ಣ ಕೊಯಿಂಗೋಡಿ, ಗೋಪಾಲಕೃಷ್ಣ ಭಟ್, ಶ್ರೀ ಕ್ಷೇತ್ರದ ಅಧ್ಯಕ್ಷ ಕೇಶವ ಸಿ.ಎ ಹೊಸಗದ್ದೆ, ಕಾರ್ಯದರ್ಶಿ ಸುಂದರ ಕುದ್ಪಾಜೆ, ಸಂಚಾಲಕ ಜಗನ್ನಾಥ ಜಿ ಜಯನಗರ, ಮತ್ತು ಕ್ಷೇತ್ರದ ಆಡಳಿತ ಮಂಡಳಿಯ ನಿರ್ದೆಶಕರುಗಳು, ಪದಾಧಿಕಾರಿಗಳು, ಸರ್ವ ಸದಸ್ಯರುಗಳು, ನ.ಪಂ ಸದಸ್ಯೆ ಶಿಲ್ಪಾಸುದೇವು, ಮಾಜಿ ನ.ಪಂ ಸದಸ್ಯೆ ಜಾನಕಿ ನಾರಾಯಣ, ತನುಜ ಪ್ರದೀಪ್, ನಳಿನಿ ಗೋಪಾಲಕೃಷ್ಣ ಭಟ್, ಸೌಮ್ಯ ಇರಂತಮಜಲು, ರೇವತಿ ಜಯನಗರ, ಜಯಲಕ್ಷ್ಮಿ ಜಯನಗರ ಉಪಸ್ಥಿತರಿದ್ದರು.