ಸಮಗ್ರ ನ್ಯೂಸ್: ಮಣ್ಣಿನಲ್ಲಿ ಹೂತಿಟ್ಟ ರೀತಿಯಲ್ಲಿ ಅತಿಥಿ ಶಿಕ್ಷಕಿ ಶವ ಪತ್ತೆಯಾಗಿದೆ. ಜನವರಿ 20 ಕಾಣೆಯಾಗಿದ್ದ ಮಂಡ್ಯ ಜಿಲ್ಲೆಯ ಪಾಂಡವಪುರ ಮಾಣಿಕ್ಯಹಳ್ಳಿಯ ಶಿಕ್ಷಕಿಯೊಬ್ಬರು ಇದೀಗ ಶವವಾಗಿ ಪತ್ತೆಯಾಗಿದ್ದಾರೆ. 28-ವರ್ಷ ವಯಸ್ಸಿನ ದೀಪಿಕಾ ಅವರ ಮೃತ ದೇಹ ಮೇಲುಕೋಟೆಯ ಯೋಗಾ ನರಸಿಂಹ ಸ್ವಾಮಿ ಬೆಟ್ಟದ ಬಳಿ ಹೂತಿಟ್ಟ ಸ್ಥಿತಿಯಲ್ಲಿ ಸಿಕ್ಕಿದೆ.
ವಿವಾಹಿತೆಯಾಗಿದ್ದ ದೀಪಿಕಾಗೆ 8-ವರ್ಷ ವಯಸ್ಸಿನ ಮಗ ಇದ್ದಾನೆ. ಕುಟುಂಬದ ಮೂಲಗಳ ಪ್ರಕಾರ ಮೃತ ದೀಪಿಕಾ ಮೇಲುಕೋಟೆಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಶನಿವಾರದಂದು ಶಾಲೆಗೆ ಹೋಗಿದ್ದ ದೀಪಿಕಾ ಸಂಜೆಯಾದರೂ ಮನೆಗೆ ಬಾರದೇ ಹೋದಾಗ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು ಮತ್ತು ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸೋಮವಾರ ಸಾಯಂಕಾಲ ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ಶಿಕ್ಷಕಿಯ ಸ್ಕೂಟರ್ ನಿಂತಿರುವುದು ಪತ್ತೆಯಾಗಿತ್ತು. ಸ್ಕೂಟರ್ ಗಮನಿಸಿ ಜನ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಬಂದು ಪರಿಶೀಲನೆ ಮಾಡಿದ್ದಾಗ ಮೃತದೇಹ ಪತ್ತೆಯಾಗಿದೆ. ದೀಪಿಕಾ ಕೊಲೆಯಾಗಿರಬಹುದಾದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಪಾಂಡವಪುರ ತಾಲ್ಲೂಕು ಆಸ್ಪತ್ರೆಗೆ ಕಳಿಸಲಾಗಿದೆ. ಶವಪರೀಕ್ಷೆಯ ನಂತರವೇ ದೀಪಿಕಾ ಸಾವಿನ ನಿಖರ ಕಾರಣ ಗೊತ್ತಾಲಿದೆ.
ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ದೀಪಿಕಾ ಪತಿ ಲೋಕೇಶ್ ಮಾಣಿಕ್ಯನಹಳ್ಳಿ ಯುವಕನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ದೀಪಿಕಾನ ಅಕ್ಕ ಎಂದು ಕರೆಯುತ್ತಿದ್ದ, ದೀಪಿಕಾ ಯಾವಾಗಲೂ ಸ್ಕೂಲ್ ಬಸ್ ನಲ್ಲೆ ಹೋಗಿ ಬರ್ತಿದ್ಲು, ಶನಿವಾರ ಬಸ್ ಮಿಸ್ ಆಗಿದ್ದ ಕಾರಣ ಸ್ಕೂಟರ್ ನಲ್ಲಿ ತೆರಳಿದ್ಲು, ಸಂಜೆ ಪೋನ್ ಬಂದಿದರಿಂದ ದೀಪಿಕಾ ಆಚೆ ಹೋಗಿದ್ದಾಳೆ. ಆಮೇಲೆ ಫೋನ್ ಮಾಡಿದ್ದಾಗ ಸ್ವಿಚ್ ಆಫ್ ಬಂದಿದೆ. ಅವಳ ಫೋನ್ ಕಾಲ್ನಲ್ಲಿ ಅವನದ್ದೆ ಲಾಸ್ಟ್ ನಂಬರ್ ಇದೆ. ಮೃತ ದೇಹ ಸಿಕ್ಕಿದ ದಿನದಿಂದ ಆ ಯುವಕ ನಾಪತ್ತೆಯಾಗಿದ್ದಾನೆ ಎಂದು ಮೃತ ದೀಪಿಕಾ ಪತಿ ಲೋಕೇಶ್ ಹೇಳಿಕೆ ನೀಡಿದ್ದಾರೆ.