ಸಮಗ್ರ ನ್ಯೂಸ್: ಇಂದು ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆಗೊಳ್ಳಲಿದೆ. ಇದರಲ್ಲಿ ಕರ್ನಾಟಕದ ಪಾಲು ಬಹು ಮಟ್ಟಿಗಿದೆ. ಅದರಲ್ಲೂ ಕರ್ನಾಟಕದಲ್ಲಿ ರಾಮ ಭಕ್ತರ ಕಲಾವಿದರು ರಾಮ ಮಂದಿರದ ಸ್ಥಬ್ದಚಿತ್ರಗಳನ್ನು ರಚಿಸುತ್ತಿದ್ದಾರೆ. ಇತ್ತೀಚೆಗೆ ಪೆನ್ಸಿಲ್ ಲೆಡ್ನಲ್ಲಿ ರಾಮನ ಕೆತ್ತನೆ, ಕೇಕ್ನಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ, ಚಾಕು ಪೀಸ್ ನಲ್ಲಿ ಶ್ರೀರಾಮ, ಎಲೆಯಲ್ಲಿ ಶ್ರೀರಾಮ, ಜೈ ಶ್ರೀರಾಮ್ ಹೆಸರುಗಳಲ್ಲೇ ರಾಮನ ಚಿತ್ರ ಬಿಡಿಸಿರುವುದು ಸೇರಿದಂತೆ ಅನೇಕ ರೀತಿಯ ಚಿತ್ರಗಳನ್ನು ಬಿಡಿಸಲಾಗಿತ್ತು. ಆದರೆ ಇದೀಗ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆ ನೀಡಲು ದಾವಣಗೆರೆಯಲ್ಲಿ ನಾಣ್ಯಗಳಲ್ಲಿ ಅಯೋಧ್ಯೆ ರಾಮ ಮಂದಿರ ಸಿದ್ಧಪಡಿಸಲಾಗಿದೆ.
ದಾವಣಗೆರೆಯ ಹರಿಹರ ನಗರದ ಆಕಾರ-ಆಧಾರ ಸಂಸ್ಥೆಯ ರಾಮು ಎಂ ಹಾಗೂ ಮಕ್ಕಳು ಸೇರಿಕೊಂಡು ಒಂದು, ಎರಡು, ಐದು, 10, 20 ರೂಪಾಯಿ ಮೌಲ್ಯದ ಒಟ್ಟು 12 ಸಾವಿರ ನಾಣ್ಯ ಬಳಸಿ ಶ್ರೀರಾಮ ಮಂದಿರ ನಿರ್ಮಾಣ ಮಾಡಿದ್ದಾರೆ. ಒಟ್ಟು 31,500 ರೂಪಾಯಿ ವೆಚ್ಚದಲ್ಲಿ 30 ದಿನಗಳಲ್ಲಿ ಈ ಮಂದಿರವನ್ನು ಸಿದ್ಧಪಡಿಸಲಾಗಿದೆ. ನಾಳೆ ರಾಮ ಮಂದಿರದ ಉದ್ಘಾಟನೆ ಹಿನ್ನೆಲೆ ನಾಣ್ಯಗಳಿಂದ ಸಿದ್ಧವಾದ ಮಂದಿರವನ್ನು ಹುಬ್ಬಳ್ಳಿಯಲ್ಲಿ ಪ್ರದರ್ಶನಕ್ಕಿಡಲಾಗುತ್ತಿದೆ.