Ad Widget .

ಮಡಿಕೇರಿ:ನಗರಸಭೆಯಿಂದ ರಾಜಾಸೀಟ್ ಎದುರಲ್ಲೇ ವ್ಯಾಪಾರ ನಡೆಸುತ್ತಿದ್ದ ಬೀದಿ ಬದಿ ವ್ಯಾಪಾರಿಗಳ ಎತ್ತಂಗಡಿ|ತೀವ್ರ ಪ್ರತಿರೋಧ ರಾತ್ರಿ ನಗರಸಭೆ ಮುಂಭಾಗ ಪ್ರತಿಭಟನೆ

ಸಮಗ್ರ ನ್ಯೂಸ್: ಕೊಡಗಿನ ಪ್ರಮುಖ ಪ್ರವಾಸಿ ಕೇಂದ್ರ ರಾಜ ಸೀಟ್ ಮುಂಭಾಗ ಎಗ್ಗಿಲ್ಲದೆ ಆಹಾರ ಪದಾರ್ಥಗಳನ್ನು ಹಾಗೂ ಅಲಂಕಾರಿಕ ವಸ್ತುಗಳನ್ನು ಇಟ್ಟು ವ್ಯಾಪಾರ ನಡೆಸುತ್ತಿದ್ದು ಇದರಿಂದ ಪ್ರವಾಸಿಗರಿಗೆ ಹಾಗೂ ರಾಜ ಸೀಟ್ ಮುಂಭಾಗದ ರಸ್ತೆಯಲ್ಲಿ ಸಂಚರಿಸುವವರೆಗೆ ತೀವ್ರ ಸ್ವರೂಪದ ತೊಂದರೆ ಹಾಗೂ ಅಡಚಣೆ ಉಂಟಾಗುತ್ತಿತ್ತು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಅನ್ವಯ ಹಿಂದಿನ ಜಿಲ್ಲಾಧಿಕಾರಿ ಸತೀಶ್ ರಾಜಾಸೀಟ್ ದ್ವಾರದಲ್ಲೇ ಬೀದಿ ಬದಿ ವ್ಯಾಪಾರದ ಹೆಸರಲ್ಲಿ ಗಾಡಿಗಳನ್ನಿಟ್ಟುಕೊಂಡು ಸಾರ್ವಜನಿಕರ ಓಡಾಟಕ್ಕೆ ತೊಂದರೆಯುಂಟು ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನು ಸ್ಥಳದಿಂದ ತೆರವುಗೊಳಿಸಿದ್ದರು.

Ad Widget . Ad Widget . Ad Widget .

ಆದರೆ ಇದೀಗ ಮತ್ತೆ ಪುನ್ಹ ಇಲ್ಲಿನ ಪರಿಸರವನ್ನು ಬೀದಿ ಬದಿ ವ್ಯಪಾರಿಗಳು ಹಾಳುಗೆಡವಲು ಹೊರಟ್ಟಿದ್ದಾರೆ. ನಗರಸಭೆ ಹಲವು ಭಾರಿ ಎಚ್ಚರಿಕೆ ನೀಡಿಯೂ ಕ್ಯಾರೆ ಎನ್ನದೇ ತಮ್ಮಿಷ್ಟದಂತೆ ಮತ್ತೆ ಅದೇ ಸ್ಥಳಕ್ಕೆ ಬಂದು ಚಟುವಟಿಕೆ ನಡೆಸುತ್ತಾ ವಾಹನ ಪಾರ್ಕಿಂಗ್ , ವಾಹನ ಸಂಚಾರ, ಹಾಗೂ ಸಾರ್ವಜನಿಕ ಓಡಾಟಕ್ಕೆ ಅಡ್ಡಿಯುಂಟು ಮಾಡುತ್ತಿದ್ದವರನ್ನು ಸಾರ್ವಜನಿಕ/ಇಲಾಖಾ ದೂರುಗಳ ಆಧಾರದಲ್ಲಿ ಅಂತಿಮವಾಗಿ ನಗರಸಭೆಯು ಅಲ್ಲಿಂದ ನಿನ್ನೆ ತೆರವುಗೊಳಿಸಿದೆ.

ಆಹಾರ ಸುರಕ್ಷತಾ ನಿಯಮಗಳನ್ನ ಪಾಲಿಸದೇ ಅಶುಚಿತ್ವದಿಂದ ಕೂಡಿದ ಆಹಾರ ಪದಾರ್ಥಗಳ ಮಾರಾಟ, ಗ್ರಾಹಕರಿಂದ ದುಪ್ಪಟ್ಟು ಬೆಲೆ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಇವರ ಮೇಲಿದೆ. ಬೀದಿ ಬದಿ ವ್ಯಾಪಾರಕ್ಕೆ ನಿಗದಿ ಪಡಿಸಿರುವ ಗುರುತಿನ ಚೀಟಿ ಪಡೆದು ಕೊಳ್ಳದೆ ಕಾನೂನಿಗೆ ವಿರುದ್ಧವಾಗಿ ವ್ಯಾಪಾರ ಮಾಡುವುದು, ಸರಕಾರಿ /ಅರೆ ಸರಕಾರಿ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಪ್ರವಾಸಿಗರ ಸುಲಿಗೆಗಾಗಿ ಬೀದಿ ಬದಿ ವ್ಯಾಪಾರ ಮಾಡುವುದು, ನಗರ ಸಭೆಯಿಂದ ಬೀದಿ ಬದಿ ವ್ಯಾಪಾರಕ್ಕೆಂದೇ ಸ್ಥಳ ಗುರುತಿಸಿದ್ದರೂ ಸಹ ಅಲ್ಲಿಗೆ ತೆರಳದೇ ಅಧಿಕಾರಿಗಳ ಮಾತಿಗೂ ಕ್ಯಾರೆ ಅನ್ನದೇ ತಮಗೆ ಬೇಕಾದ ಸ್ಥಳದಲ್ಲಿ ತಮ್ಮಿಷ್ಟದಂತೆ ವ್ಯಾಪಾರ ನಡೆಸುವುದು.ಹೀಗೆ ಹಲವು ಕಾರಣಗಳಿಗಾಗಿ ರಾಜಸೀಟು ದ್ವಾರದ ಎದುರಲ್ಲೇ ಠಿಕಾಣಿ ಹೂಡಿ ವ್ಯಾಪಾರ ನಡೆಸುತ್ತಿದ್ದವರನ್ನು ನಗರಸಭೆಯು ಯಾವುದೇ ಒತ್ತಡಗಳಿಗೂ ಮಣಿಯದೆ ತೆರವುಗೊಳಿಸಿದೆ.

ತೆರವುಗೊಳಿಸುವ ಸಂದರ್ಭ ತೀವ್ರ ಸ್ವರೂಪದ ಪ್ರತಿರೋದವನ್ನು ವ್ಯಕ್ತಪಡಿಸಿ ಇದೀಗ ಬೀದಿ ಬದಿ ವ್ಯಾಪಾರಿಗಳು ನಗರಸಭೆ ಮುಂದೆ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಇವರಿಗೆ ರಾಜಕೀಯ ಪಕ್ಷವೊಂದು ತೆರೆಯ ಮರೆಯಲ್ಲಿ ಪರೋಕ್ಷವಾಗಿ ಬೆಂಬಲ ನೀಡಿ ಪ್ರಚೋದಿಸುತಿದೆ ಎಂದು ಹೇಳಲಾಗುತ್ತಿದೆ.

ಕೂಡಲೇ ನಗರಸಭೆ ಇವರಿಗೆ ಶಾಶ್ವತವಾಗಿ ಜಾಗವನ್ನು ಗುರುತಿಸಿ, ನ್ಯಜ ಸ್ಥಳಿಕರಿಗೆ ಅವಕಾಶ ಮಾಡಿಕೊಟ್ಟು ಗುರುತಿನ ಚೀಟಿ ನೀಡಿ ಬದುಕು ಕಟ್ಟಿಕೊಳಲ್ಲು ಇವರುಗಳಿಗೆ ಅವಕಾಶ ಮಾಡಿಕೊಡಬೇಕಾಗಿದೆ. ಹಾಗೆ ರಾಜಸೀಟ್ ಮುಂಭಾಗ ವ್ಯಾಪಾರಕ್ಕೆ ನಿರ್ಬಂಧಿತ ಪ್ರದೇಶವೆಂಬ ಆದೇಶವನ್ನು ನಗರಸಭೆ ಹೊರಡಿಸಿ ಫಲಕವನ್ನಿಟ್ಟು ಶಾಶ್ವತವಾಗಿ ಈ ಭಾಗದಲ್ಲಿ ವ್ಯಾಪಾರ ವಹಿವಾಟು ನಡೆಸದಂತೆ ಕ್ರಮ ಕೈಗೊಳ್ಳಬೇಕಾಗಿದೆ.

Leave a Comment

Your email address will not be published. Required fields are marked *