ಸಮಗ್ರ ನ್ಯೂಸ್: ಅಯೋಧ್ಯೆ ರಾಮಮಂದಿರ ನಿರ್ಮಾಣದ ನೆನಪಿಗಾಗಿ ಅಂಚೆ ಚೀಟಿ ಮತ್ತು ಭಗವಾನ್ ರಾಮನ ಕುರಿತು ಬಿಡುಗಡೆ ಮಾಡಲಾದ ಅಂಚೆ ಚೀಟಿಗಳ ಪುಸ್ತಕವನ್ನು ಪ್ರಧಾನಿ ಮೋದಿ ಇಂದು ಬಿಡುಗಡೆ ಮಾಡಿದ್ದಾರೆ.
ಶ್ರೀ ರಾಮ್ ಜನ್ಮಭೂಮಿ ಮಂದಿರದ 6 ಸ್ಮರಣಾರ್ಥ ಅಂಚೆ ಚೀಟಿಗಳು ಮತ್ತು ವಿಶ್ವದಾದ್ಯಂತ ಭಗವಾನ್ ರಾಮನ ಬಗ್ಗೆ ಬಿಡುಗಡೆ ಮಾಡಿದ ಅಂಚೆಚೀಟಿಗಳ ಆಲ್ಬಮ್ ನ್ನು ಬಿಡುಗಡೆ ಮಾಡಲಾಗಿದೆ. ನಾನು ದೇಶದ ಜನರನ್ನ ಮತ್ತು ವಿಶ್ವದಾದ್ಯಂತದ ಎಲ್ಲಾ ರಾಮ ಭಕ್ತರನ್ನು ಅಭಿನಂದಿಸಲು ಬಯಸುತ್ತೇನೆ ಎಂದು ಅಂಚೆ ಚೀಟಿಗಳ ಬಿಡುಗಡೆಯ ಬಳಿಕ ಪ್ರಧಾನಿ ಮೋದಿ ಹೇಳಿದರು.
ಸ್ಟಾಂಪ್ ಬುಕ್ ವಿವಿಧ ಸಮಾಜಗಳಲ್ಲಿ ಭಗವಂತ ರಾಮನ ಅಂತಾರಾಷ್ಟ್ರೀಯ ಆಕರ್ಷಣೆಯನ್ನ ಪ್ರದರ್ಶಿಸುವ ಗುರಿಯನ್ನ ಹೊಂದಿದೆ. 48 ಪುಟಗಳ ಈ ಪುಸ್ತಕವು ಯುಎಸ್, ನ್ಯೂಜಿಲೆಂಡ್, ಸಿಂಗಾಪುರ್, ಕೆನಡಾ, ಕಾಂಬೋಡಿಯಾ ಮತ್ತು ವಿಶ್ವಸಂಸ್ಥೆಯಂತಹ ಸಂಸ್ಥೆಗಳು ಸೇರಿದಂತೆ 20ಕ್ಕೂ ಹೆಚ್ಚು ದೇಶಗಳು ಬಿಡುಗಡೆ ಮಾಡಿದ ಅಂಚೆಚೀಟಿಗಳನ್ನ ಒಳಗೊಂಡಿದೆ.